ಕ್ಯಾಬೇಜ್ ಪಕೋಡಾ

ಕ್ಯಾಬೇಜ್ ಪಕೋಡಾ ಮಾಡುವ ವಿಧಾನ...
ಕ್ಯಾಬೇಜ್ ಪಕೋಡಾ
ಕ್ಯಾಬೇಜ್ ಪಕೋಡಾ

ಬೇಕಾಗುವ ಪದಾರ್ಥಗಳು:

  • ಹೆಚ್ಚಿದ ಕ್ಯಾಬೇಜ್ - 1 ಬಟ್ಟಲು
  • ಕಡ್ಲೆಹಿಟ್ಟು - 1.1/2 ಬಟ್ಟಲು
  • ಖಾರಪುಡಿ - 2 ಚಮಚ
  • ಹೆಚ್ಚಿದ ಈರುಳ್ಳಿ - 1/2 ಬಟ್ಟಲು
  • ಕೊತ್ತಂಬರಿ ಸೊಪ್ಪು- 4 ಚಮಚ
  • ಇಂಗು - 1 ಚಮಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟು - 1 ಚಮಚ
  • ಧನಿಯಾ ಪುಡಿ - ಒಂದು ಚಮಚ
  • ಜೀರಿಗೆ ಪುಡಿ- ಒಂದು ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
  • ಕಡ್ಲೆಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ಸ್ವಲ್ಪ ಗಟ್ಟಿ ಹದಕ್ಕೆ ಕಲಸಿಕೊಳ್ಳಿ.
  • ನಂತರ ಇದಕ್ಕೆ ಖಾರದ ಪುಡಿ, ಹೆಚ್ಚಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಇಂಗು, ಶುಂಠಿ-ಬೆಳ್ಳುಳ್ಳು ಪೇಸ್ಟ್, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು, ಹೆಚ್ಚಿಟ್ಟುಕೊಂಡ ಕ್ಯಾಬೇಜ್ ಎಲ್ಲಾ ಸಾಮಾಗ್ರಿಗಳನ್ನು ಒಂದೊಂದಾಗಿ ಸೇರಿಸಿ ಕಲಸಿ.
  •  ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ.
  • ಎಣ್ಣೆ ಕಾದ ಮೇಲೆ ಮಿಶ್ರಣಮಾಡಿಟ್ಟಕೊಂಡದ್ದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಕಾದ ಎಣ್ಣೆಗೆ ಹಾಕಿ. ಗರಿಗರಿಯಾಗಿ ಕರಿದರೆ ಬಿಸಿ ಬಿಸಿ ಕ್ಯಾಬೇಜ್ ಪಕೋಡಾ ಸಿದ್ಧವಾಗುತ್ತದೆ.
  • ಪಕೋಡಾವನ್ನು ಪುದಿನಾ ಚಟ್ನಿಯೊಂದಿಗೆ ಸವಿದರೆ ಹೆಚ್ಚು ರುಚಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com