ಸಬ್ಬಕ್ಕಿ ದೋಸೆ

ಸಬ್ಬಕ್ಕಿ ದೋಸೆ ಮಾಡುವ ವಿಧಾನ...
ಸಬ್ಬಕ್ಕಿ ದೋಸೆ
ಸಬ್ಬಕ್ಕಿ ದೋಸೆ

ಬೇಕಾಗುವ ಪದಾರ್ಥಗಳು

  • ಸಬ್ಬಕ್ಕಿ - ಅರ್ಧ ಬಟ್ಟಲು
  • ಅಕ್ಕಿ ಹುಡಿ - ಅರ್ಧ ಬಟ್ಟಲು
  • ಮೊಸರು - ಅರ್ಧ ಬಟ್ಟಲು
  • ಹಸಿಮೆಣಸಿಕಾಯಿ - 2-3
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ತುರಿದ ಕ್ಯಾರೆಟ್ - ಸ್ವಲ್ಪ
  • ಈರುಳ್ಳು - 2
  • ತೆಂಗಿನಕಾಯಿ ತುರಿ - ಅರ್ಧ ಬಟ್ಟಲು
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಸ್ವಲ್ಪ
ಮಾಡುವ ವಿಧಾನ...
  • ಸಬ್ಬಕ್ಕಿಯನ್ನು 3-4 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
  • ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿಕಾಯಿ ಹಾಗೂ ಕರಿಬೇವಿನಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
  • ನೆನೆಸಿ, ತೊಳೆದ ಸಬ್ಬಕ್ಕಿಯನ್ನು ಮಿಕ್ಸಿಗೆ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಮೊಸರು, ಅಕ್ಕಿಹುಡಿ, ತೆಂಗಿನ ತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಅಗತ್ಯವೆನಿಸಿದರೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿಕೊಳ್ಳಬಹುದು.
  • ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿಕಾಯಿ ಹಾಗೂ ಕರಿಬೇವಿನಸೊಪ್ಪನ್ನು ಹಿಟ್ಟಿಗೆ ಮಿಶ್ರಣ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ತವಾ ಇಟ್ಟು ಬಿಸಿಯಾದಾಗ ಸ್ವಲ್ಪ ಎಣ್ಣೆ ಹಾಕಿ ದೋಸೆ ಹಿಟ್ಟನ್ನು ಹಾಕಬೇಕು.
  • ನಂತರ ದೋಸೆಯನ್ನು 2-3 ನಿಮಿಷಗಳ ಕಾಲ ಎರಡು ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ಸಬ್ಬಕ್ಕಿ ದೋಸೆ ತಯಾರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com