ಹಾಲನ್ನು ದಪ್ಪ ತಳದ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಸುಮಾರು 15 ನಿಮಿಷ ಕುದಿಸಬೇಕು. ತಳಹತ್ತದಿರಲು ಆಗಾಗ ಚಮಚದಿಂದ ಕೈಯಾಡಿಸುತ್ತಿರಬೇಕು.
ನಂತರ ಇದಕ್ಕೆ ಕಾಯಿತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಾಲನ್ನು ಕಾಯಿತುರಿ ಪೂರ್ಣವಾಗಿ ಹೀರಿಕೊಳ್ಳುವವರೆಗೂ ಕೈಯಾಡಿಸಬೇಕು.
ಕಾಯಿತುರಿ ಹಾಲು ಹೀರಿಕೊಳ್ಳುತ್ತಿದ್ದಂತೆ ಗಟ್ಟಿಯಾಗಲು ಆರಂಭವಾಗುತ್ತದೆ. ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಹಾಕಬೇಕು.
ಸಕ್ಕರೆ ಕರಗುತ್ತಿದ್ದಂತೆ ಒಲೆಯಿಂದ ಕೆಳಗಿಳಿಸಿಕೊಳ್ಳಬೇಕು.
ಸ್ವಲ್ಪ ತಣ್ಣಗಾಗುತ್ತಿದ್ದಂತೆ ಎರಡೂ ಅಂಗೈಗಳಿಗೂ ಬೆಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಬೇಕು. ನಂತರ ಇದಕ್ಕೆ ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ಕೊಬ್ಬರಿ ಲಡ್ಡು ತಯಾರಾಗುತ್ತದೆ.