ಕಜ್ಜಾಯ

ಕಜ್ಜಾಯ ಮಾಡುವ ವಿಧಾನ...
ಕಜ್ಜಾಯ
ಕಜ್ಜಾಯ

ಬೇಕಾಗುವ ಪದಾರ್ಥಗಳು

  • ಬೆಲ್ಲ- 1 ಬಟ್ಟಲು  
  • ಕಜ್ಜಾಯದ ಅಕ್ಕಿ- 2 ಬಟ್ಟಲು
  • ಕಳಿತ ಬಾಳೆಹಣ್ಣು- 1
  • ಏಲಕ್ಕಿ ಪುಡಿ - ಸ್ವಲ್ಪ
  • ಬಿಳಿ ಎಳ್ಳು - ಸ್ವಲ್ಪ
ಮಾಡುವ ವಿಧಾನ...
  • ಹಿಂದಿನ ದಿನವೇ ಕಜ್ಜಾಯದ ಅಕ್ಕಿಯನ್ನು 3-4 ಗಂಟೆಗಳ ಕಾಲ ಚೆನ್ನಾಗಿ ನೆನೆಸಿ ನೀರನ್ನು ಬಸಿದು ಹತ್ತಿ ಬಟ್ಟೆಯ ಮೇಲೆ ಹಾಕಿ ಅಕ್ಕಿಯಲ್ಲಿರುವ ನೀರೆಲ್ಲ ಹೋಗುವಂತೆ ಆರಲು ಬಿಡಬೇಕು. ನಂತರ ಈ ಅಕ್ಕಿಯನ್ನು ಒರಳಿಗೆ ಹಾಕಿ ನೀರು ಹಾಕದಂತೆ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು.
  • 1/4 ಬಟ್ಟಲು ನೀರಿನೊಂದಿಗೆ ಬೆಲ್ಲವನ್ನು ಪುಡಿ ಮಾಡಿ ಹಾಕಿ ಪಾಕ ಮಾಡಿಕೊಳ್ಳಬೇಕು. ಪಾಕ ಅಂಟಿಗೆ ಬರುವ ತನಕ ಚೆನ್ನಾಗಿ ಕೈಯಾಡಿಸಬೇಕು.
  • ಈ ಪಾಕಕ್ಕೆ ತೊಳೆದು ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದು ತಣ್ಣಗಾಗಲು ಬಿಡಬೇಕು.
  • ತಣ್ಣಗಾದ ನಂತರ ಕಿವುಚಿದ ಬಾಳೆಹಣ್ಣು, ಏಲಕ್ಕಿ ಪುಡಿ ಹಾಗೂ ಬಿಳಿ ಎಳ್ಳನ್ನು ಹಾಕಿ ಒಂದು ರಾತ್ರಿಯಿಡೀ ಅಥವಾ 8 ಗಂಟೆಗಳ ಕಾಲ ಹಾಗೆ ಬಿಡಬೇಕು.
  • ನಂತರ ಅಗಲವಾದ ಬಾಣಲೆಯೊಂದನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಬೇಕು. ರಾತ್ರಿಯಿಡೀ ನೆನೆದ ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರವಾಗಿ ಅಗಲವಾಗಿ ತಟ್ಟಿ ಕಾದ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿದರೆ. ಬಿಸಿಬಿಸಿ ಕಜ್ಜಾಯ ತಯಾರಾಗುತ್ತದೆ.
-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com