ಗೋಳಿ ಬಜೆ

ಗೋಳಿ ಬಜೆ ಮಾಡುವ ವಿಧಾನ...
ಗೋಳಿ ಬಜೆ
ಗೋಳಿ ಬಜೆ

ಬೇಕಾಗುವ ಪದಾರ್ಥಗಳು

  • ಮೈದಾಹಿಟ್ಟು - 1 ಬಟ್ಟಲು
  • ಮೊಸರು - 1 ಬಟ್ಟಲು
  • ಸಕ್ಕರೆ ಪುಡಿ - ಅರ್ಧ ಚಮಚ
  • ಅಡುಗೆ ಸೋಡಾ - ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ - ಕರಿಯಲು
ಮಾಡುವ ವಿಧಾನ...
  • ಮೈದಾ ಹಿಟ್ಟಿಗೆ ಅಡುಗೆ ಸೋಡಾ, ಉಪ್ಪು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ನಂತರ ಇದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು. ಇಡ್ಲಿ ಹಿಟ್ಟಿನಂತೆ ಗಟ್ಟಿ ಇರಬೇಕು.
  • ನಂತರ ಹಿಟ್ಟನ್ನು 4 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಕಾಯಲು ಬಿಡಬೇಕು.
  • ಎಣ್ಣೆ ಕಾದ ನಂತರ ಚೆನ್ನಾಗಿ ನೆನೆದ ಹಿಟ್ಟನ್ನು ಉಂಡೆ ಮಾಡಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರ ಗೋಳಿ ಬಜೆ ತಯಾರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com