ಅವಲಕ್ಕಿ ಚಕ್ಕುಲಿ

ಅವಲಕ್ಕಿ ಚೆಕ್ಕುಲಿ ಮಾಡುವ ವಿಧಾನ...
ಅವಲಕ್ಕಿ ಚೆಕ್ಕುಲಿ
ಅವಲಕ್ಕಿ ಚೆಕ್ಕುಲಿ

ಪದಾರ್ಥಗಳು

  • ಅವಲಕ್ಕಿ – 250 ಗ್ರಾಂ
  • ಹಸಿಮೆಣಸಿನಕಾಯಿ – 4
  • ಜೀರಿಗೆ- ಅರ್ಧ ಚಮಚ
  • ಇಂಗು – ಅರ್ಧ ಚಮಚ
  • ಎಣ್ಣೆ- ಕರಿಯಲು
  • ಉಪ್ಪು – ರುಚಿಗೆತಕ್ಕಷ್ಟು

ಮಾಡುವ ವಿಧಾನ

  • ರಾತ್ರಿ ಅಲವಕ್ಕಿಯನ್ನುನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೆನೆಹಾಕಿ. ಮರುದಿನ ಮುಂಜಾನೆ ನೀರು ಬಸಿದು ಅದಕ್ಕೆಇಂಗು, ಉಪ್ಪು, ಜೀರಿಗೆ ಹಾಗೂ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿಕೊಂಡು ಮಿಕ್ಸಿಯಲ್ಲಿ ಅಥವಾಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿರಿ.
  • ನಂತರ ಬಿಸಿಲಿನಲ್ಲಿಬಿಳಿ ಬಟ್ಟೆ ಹಾಕಿ ಅದರ ಮೇಲೆ ಚೆಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ ಚಕ್ಕುಲಿಯನ್ನು ಒತ್ತಿಚೆನ್ನಾಗಿ ಒಣಗಿಸಿಕೊಳ್ಳಿರಿ.
  • ಚಕ್ಕುಲಿಗಳು ಚನ್ನಾಗಿಒಣಗಿದ ಮೇಲೆ ಮರುದಿನ ಎಣ್ಣೆ ಚೆನ್ನಾಗಿ ಕಾಯಿಸಿ ನಂತರ ಚೆಕ್ಕುಲಿ ಕರಿಯಿರಿ.
  • ಈಗ ರುಚಿಕರ ಚಕ್ಕುಲಿತಯಾರಾಗುತ್ತದೆ. ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಇದು ಉಪಯುಕ್ತ.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com