ಬೀಟ್ ರೂಟ್ ಹಲ್ವಾ

ಬೀಟ್ ರೂಟ್ ಹಲ್ವಾ ಮಾಡುವ ವಿಧಾನ...
ಬೀಟ್ ರೂಟ್ ಹಲ್ವಾ
ಬೀಟ್ ರೂಟ್ ಹಲ್ವಾ

ಬೇಕಾಗುವ ಪದಾರ್ಥಗಳು

  • ಬೀಟ್ ರೂಟ್ - 4
  • ಹಾಲು - 2 ಬಟ್ಟಲು
  • ಸಕ್ಕರೆ - ಅರ್ಧ ಬಟ್ಟಲು
  • ಏಲಕ್ಕಿ ಪುಡಿ - 1 ಚಮಚ
  • ತುಪ್ಪ - 3 ಚಮಚ
  • ಗೋಡಂಬಿ - ಸ್ವಲ್ಪ
  • ಒಣ ದ್ರಾಕ್ಷಿ - ಸ್ವಲ್ಪ
  • ಬಾದಾಮಿ - ಸ್ವಲ್ಪ
  • ಕೋವಾ - 100 ಗ್ರಾಂ
  • ಹಾಲು - 1 ಬಟ್ಟಲು
ಮಾಡುವ ವಿಧಾನ...
  • ಬೀಟ್ ರೂಟನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
  • ಬಾಣಲೆಯೊಂದನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಬೇಕು. ನಂತರ ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ತುರಿದುಕೊಂಡ ಬೀಟ್ ರೂಟ್'ನ್ನು ತುಪ್ಪದಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು.
  • ಇದಕ್ಕೆ ಹಾಲು ಹಾಗೂ ಕೋವಾ ಹಾಕಿ ಕಡಿಮೆ ಹುರಿಯಲ್ಲಿ ಹುರಿದುಕೊಳ್ಳಬೇಕು.
  • ನಂತರ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಕಡಿ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ಇದಕ್ಕೆ ಹಾಲನ್ನು ಸೇರಿಸಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು. ಕೊನೆಯಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿದರೆ ರುಚಿಯಾದ ಬೀಟ್ ರೂಟ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com