ಜಿಲೇಬಿ

ಜಿಲೇಬಿ ಮಾಡುವ ವಿಧಾನ...
ಜಿಲೇಬಿ
ಜಿಲೇಬಿ

ಬೇಕಾಗುವ ಪದಾರ್ಥಗಳು

  • ಮೊಸರು - ಅರ್ಧ ಬಟ್ಟಲು
  • ಕೇಸರಿ - 6 ದಳ
  • ತುಪ್ಪ (ಎಣ್ಣೆ) - ಅರ್ಧ ಬಟ್ಟಲು
  • ಸಕ್ಕರೆ - 1 1/2 ಬಟ್ಟಲು
  • ಮೈದಾಹಿಟ್ಟು - 2 ಬಟ್ಟಲು

ಮಾಡುವ ವಿಧಾನ...
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಾಗೂ ಮೊಸರು ಹಾಕಿ 2 ಬಟ್ಟಲು ನೀರು ಹಾಕಿ ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.
  • ನಂತರ ಒಲೆಯ ಮೇಲೆ ಪಾತ್ರೆಯಿಟ್ಟು ನೀರು ಹಾಗೂ ಸಕ್ಕರೆ ಹಾಕಿ ಪಾಕವನ್ನು ತಯಾರು ಮಾಡಿಕೊಳ್ಳಬೇಕು.
  • ತುಪ್ಪವನ್ನು ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಬೇಕು.
  • ಶುಭ್ರವಾದ ಕಾಟನ್ ಬಟ್ಟೆಯೊಂದನ್ನು ತೆಗೆದುಕೊಂಡು ಅದರ ಮಧ್ಯೆ ತೂತು ಮಾಡಿ ಆ ಬಟ್ಟೆಗೆ ಈ ಮೊದಲೇ ತಯಾರಿ ಮಾಡಿಟ್ಟುಕೊಂಡ ಹಿಟ್ನನ್ನು ಹಾಸಿ ಬಿಸಿಯಾದ ತುಪ್ಪಕ್ಕೆ ಹಾಕಿ ಕೆಂಪಗಾಗುವವರೆಗೆ ಕರಿದುಕೊಳ್ಳಬೇಕು.
  • ಈ ಕರಿದ ಜಿಲೇಬಿಯನ್ನು ತಣ್ಣಗಾದ ಸಕ್ಕರೆ ಪಾಕಕ್ಕೆ ಹಾಕಿದರೆ ಬಿಸಿಬಿಸಿಯಾದ ರುಚಿಕರ ಜಿಲೇಜಿ ಸವಿಯಲು ತಯಾರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com