ಮೈಸೂರ್ ಪಾಕ್

ಮೈಸೂರ್ ಪಾಕ್ ಮಾಡುವ ವಿಧಾನ...
ಮೈಸೂರ್ ಪಾಕ್
ಮೈಸೂರ್ ಪಾಕ್

ಬೇಕಾಗುವ ಪದಾರ್ಥಗಳು...

  • ಕಡಲೆ ಹಿಟ್ಟು - 1 ಬಟ್ಟಲು
  • ಸಕ್ಕರೆ - 2 ಬಟ್ಟಲು
  • ತುಪ್ಪ - 1.1/2 ಬಟ್ಟಲು
ಮಾಡುವ ವಿಧಾನ...
  • ಮೊದಲು ಒಲೆಯ ಮೇಲೆ ಪಾತ್ರೆಯಿಟ್ಟು ನೀರನ್ನು ಬಿಸಿ ಮಾಡಿಕೊಳ್ಳಬೇಕು. ನಂತರ ಸಕ್ಕರೆಯನ್ನು ಹಾಕಬೇಕು.
  • ಸಕ್ಕರೆ ಕರಗಿದ ಬಳಿಕ ಸ್ವಲ್ಪ ಕಡಲೆಹಿಟ್ಟುನ್ನು ಸ್ವಲ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ತುಪ್ಪವನ್ನು ಹಾಗಿ ಚೆನ್ನಾಗಿ ಕೈಯಾಡಿಸಬೇಕು. ಹೀಗೆಯೇ ಸ್ವಲ್ಪ ಕಡಲೆಹಿಟ್ಟು ಸ್ವಲ್ಪ ತುಪ್ಪ ಹಾಕಿ ಗಂಟಾಗದಂತೆ ಚೆನ್ನಾಗಿ ತಿರುವುತ್ತಿರಬೇಕು.
  • ತಳಹಿಡಿಯದಂತೆಯೇ 10-15 ನಿಮಿಷ ಒಲೆಯ ಮೇಲಿಟ್ಟು ಇಳಿಸಬೇಕು.
  • ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ, ತಯಾರಾದ ಮೈಸೂರ್ ಪಾಕನ್ನು ಹಾಕಿ ತಣ್ಣಗಾಗಲು ಬಿಡಬೇಕು.
  • 1 ಗಂಟೆ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಹಾಗೂ ವಿಶೇಷವಾದ ಮೈಸೂರ್ ಪಾಕ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com