ಆಲೂ ಪಾಸ್ತ

ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ, ರುಚಿಕರವಾದ ಆಲೂ ಪಾಸ್ತ ಮಾಡುವ ವಿಧಾನ...
ಆಲೂ ಪಾಸ್ತ
ಆಲೂ ಪಾಸ್ತ
ಬೇಕಾಗುವ ಪದಾರ್ಥಗಳು
  • ಆಲೂಗಡ್ಡೆ - 3-4
  • ಕಾಳು ಮೆಣಸಿನ ಪುಡಿ - 1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಮೊಟ್ಟೆ - 1 
  • ಅಚ್ಛ ಖಾರದ ಪುಡಿ - 1/2 ಚಮಚ
  • ಗರಂ ಮಸಾಲಾ ಪುಡಿ - 1/2 ಚಮಚ
  • ಈರುಳ್ಳಿ - 1 
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
  • ಮೈದಾ ಹಿಟ್ಟು - 2 ಬಟ್ಟಲು
ಮಾಡುವ ವಿಧಾನ...
  • ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಬಟ್ಟಲಿನಲ್ಲಿ ಹಾಕಿಕೊಳ್ಳಬೇಕು. 
  • ಬೆಂದ ಆಲೂಗಡ್ಡೆಯನ್ನು ಗಡ್ಡೆಯಿಲ್ಲದಂತೆ ಚೆನ್ನಾಗಿ ಹಿಸುಕಿಕೊಳ್ಳಬೇಕು. 
  • ಇದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮೊಟ್ಟೆಯನ್ನು ಹೊಡೆದು ಚೆನ್ನಾಗಿ ಮಿಶ್ರಣ ಮಾಡಬೇಕು.
  • ನಂತರ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹಿಟ್ಟು ಚಪಾತಿ ಹಿಟ್ಟಿನಂತೆ ಮೆತ್ತಗೆ ಇರಬೇಕು. 
  • ಹಿಟ್ಟನ್ನು ನಾಲ್ಕು ಭಾಗ ಮಾಡಿಕೊಂಡು ಒಂದೊಂದು ಭಾಗವನ್ನು ಉದ್ದಕ್ಕೆ ಮಾಡಿಕೊಂಡು ಪಾಸ್ತ ರೀತಿಯಲ್ಲಿ ಸಣ್ಣದಾಗಿ ಕತ್ತರಿಸಿಕೊಂಡು ಬೇಕಾದ ಆಕಾರಕ್ಕೆ ಮಾಡಿಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಮಾಡಿಕೊಂಡ ಆಲೂ ಪಾಸ್ತವನ್ನು ಹಾಕಿ ಕೆಂಪಗೆ ಕರಿದುಕೊಳ್ಳಬೇಕು. 
  • ಮತ್ತೊಂದೆಡೆ ಪ್ಯಾನ್ ಗೆ ಎಣ್ಣೆ ಹಾಕಿ, ಸಾಸಿವೆ, ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಇದಕ್ಕೆ ಗರಂ ಮಸಾಲಾ ಪುಡಿ, ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ 1-2 ನಿಮಿಷ ಕೈಯಾಡಿಸಬೇಕು. ಅಗತ್ಯವೆನಿಸಿದರೆ, ಖಾರದ ಪುಡಿ ಬದಲು ಚಿಲ್ಲಿ ಸಾಸ್, ಟೊಮೆಟೋ ಸಾಸ್ ಬಳಸಿಕೊಳ್ಳಬಹುದು. ಇದಾದ ಬಳಿಕ ಎಣ್ಣೆಯಲ್ಲಿ ಕರಿದ ಪಾಸ್ತಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ರುಚಿಕರವಾದ ಆಲೂ ಪಾಸ್ತ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com