ಬೆಳಗಾವಿ ಕುಂದಾ

ರುಚಿಕರವಾದ ಬೆಳಗಾವಿ ಕುಂದಾ ಮಾಡುವ ವಿಧಾನ...
ಬೆಳಗಾವಿ ಕುಂದಾ
ಬೆಳಗಾವಿ ಕುಂದಾ
ಬೇಕಾಗುವ ಪದಾರ್ಥಗಳು
  • ಹಾಲು- 1 ಲೀಟರ್
  • ಮೊಸರು - 1 ಬಟ್ಟಲು
  • ಸಕ್ಕರೆ - ಬಟ್ಟಲು
  • ಗೋಡಂಬಿ - ಸ್ವಲ್ಪ
  • ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಹಾಲು ಹಾಕಿ. ಹಾಲು ಚೆನ್ನಾಗಿ ಕುದಿಯಲು ಬಿಡಬೇಕು. 1 ಲೀಟರ್ ಹಾಲು ಅರ್ಧ ಲೀಟರ್ ಆಗುವಷ್ಟು ಕೆಂಪಗೆ ಕಾಯುವಂತೆ ನೋಡಿಕೊಳ್ಳಬೇಕು. 
  • ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಕುದಿಸಬೇಕು. ಆಗಾಗ ಕೈಯಾಡಿಸುತ್ತಿರಬೇಕು. ಹಾಲಿನೊಂದಿಗೆ ಚೆನ್ನಾಗಿ ಬೆರೆತು ಕೆಂಪಗಾಗುವಂತೆ ಕಾಯಿಸಬೇಕು. 
  • ನಂತರ ಬಾಣಲೆ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಉರಿಯಬೇಕು. ಸಕ್ಕರೆ ಕರಗಿದ ಬಳಿಕ ಕಾದ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಬೇಕು. 
  • ಕೊನೆಯದಾಗಿ ಗೋಡಂಬಿ ಹಾಕಿ ಅಲಂಕರಿಸಿದರೆ ರುಚಿಕರವಾದ ಬೆಳಗಾವಿ ಕುಂದಾ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com