ಮಟನ್ ಘೀ ರೋಸ್ಟ್

ಮಟನ್ ಘೀ ರೋಸ್ಟ್ ಮಾಡುವ ವಿಧಾನ...
ಮಟನ್ ಘೀ ರೋಸ್ಟ್
ಮಟನ್ ಘೀ ರೋಸ್ಟ್
ಬೇಕಾಗುವ ಪದಾರ್ಥಗಳು
  • ತುಪ್ಪ - 3 ಚಮಚ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಅರಿಶಿಣ - ಅರ್ಧ ಚಮಚ
  • ಮಟನ್ - 1 ಕೆಜಿ
  • ಉಪ್ಪು - ರುಚಿಗೆ ತಕ್ಕಷ್ಟು
  • ಕಾಶ್ಮೀರಿ ಮೆಣಸಿನ ಕಾಯಿ - 4-5
  • ದನಿಯಾ - 1 ಚಮಚ
  • ಮೆಣಸು - 1 ಚಮಚ
  • ಸೋಂಪು - 1 ಚಮಚ
  • ಜೀರಿಗೆ - 2 ಚಮಚ
  • ಚಕ್ಕೆ - 1
  • ಲವಂಗ - 4
  • ಕೆಂಪು ಮೆಣಸಿನ ಕಾಯಿ -  6
ಮಾಡುವ ವಿಧಾನ...
  • ಮೊದಲು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ತುಪ್ಪ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು, ಮೆಟನ್ ಹಾಕಿ, ನೀರು ಹಾಕಿ 4-5 ಕೂಗು ಕೂಗಿಸಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಕಾಶ್ಮೀರಿ ಮೆಣಸಿಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ದನಿಯಾ, ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಕೆಂಪು ಮೆಣಸಿನ ಕಾಯಿಯನ್ನು ಹುರಿದುಕೊಳ್ಳಬೇಕು. 
  • ಮಿಕ್ಸಿ ಜಾಗೆದುಕೊಂಡು ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳ, ಬೆಳ್ಳುಳ್ಳಿ ದೊಡ್ಡ 2 ಎಸಳು, ಶುಂಠಿ ಚಿಕ್ಕದು, ನಿಂಬೆಹಣ್ಣಿನ ರಸ ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 
  • ಪ್ರೆಷರ್ ಕುಕ್ಕರ್ ಮುಚ್ಚಳ ತೆಗೆದು ಬಂದಿರುವ ಮಟನ್ ನಲ್ಲಿ ಉಳಿದ ನೀರನ್ನು ತೆಗೆದು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು. 
  • ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ರುಬ್ಬಿಕೊಂಡ ಮಿಶ್ರಣ, ಅರ್ಧ ಬಟ್ಟಲು ಮೊಸರು, ಮಟನ್ ನಿಂದ ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಬೆಂದ ಮಟನ್ ಹಾಕಿ 5-10 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com