ಮಂಗಳೂರು ಬನ್ಸ್

ರುಚಿಕರವಾದ ಮಂಗಳೂರು ಬನ್ಸ್ ಮಾಡುವ ವಿಧಾನ...
ಮಂಗಳೂರು ಬನ್ಸ್
ಮಂಗಳೂರು ಬನ್ಸ್
ಬೇಕಾಗುವ ಪದಾರ್ಥಗಳು
  • ಬಾಳೆಹಣ್ಣು - 2-3
  • ಮೈದಾ ಹಿಟ್ಟು - 2 ಬಟ್ಟಲು
  • ಸಕ್ಕರೆ - 1 ಚಮಚ
  • ಮೊಸರು - ಅರ್ಧ ಬಟ್ಟಲು
  • ಅಡುಗೆ ಸೋಡಾ - 1 ಚಿಟಿಕೆಯಷ್ಟು
  • ಜೀರಿಗೆ - ಅರ್ಧ ಚಮಚ
  • ಎಣ್ಣೆ - ಕರಿಯಲು ಅಗತ್ಯವಿದ್ದಷ್ಟು
  • ಉಪ್ಪು - ಅರ್ಧ ಚಮಚ
ಮಾಡುವ ವಿಧಾನ...
  • ಬಾಳೆಹಣ್ಣಿನ ಸಿಪ್ಪೆ ತೆಗೆದು ಸಣ್ಣ ಪಾತ್ರೆಯೊಂದರಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. 
  • ಬಳಿಕ ಇದಕ್ಕೆ ಮೊಸರು, ಸಕ್ಕರೆ, ಸೋಡಾ, ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಮೈದಾಹಿಟ್ಟು ಹಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ತಯಾರು ಮಾಡಿಕೊಳ್ಳಬೇಕು. ಬಳಿಕ ಕಲಸಿದ ಹಿಟ್ಟು 8-10 ಗಂಟೆಗಳ ಕಾಲ ನೆನೆಯಲು ಬಿಡಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.  ನಿಂಬೆಹಣ್ಣಿನ ಗಾತ್ರಕ್ಕೆ ಹಿಟ್ಟನ್ನು ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿಕೊಳ್ಳಬೇಕು. ಕಾದ ಎಣ್ಣೆಗೆ ಈ ಲಟ್ಟಿಸಿಕೊಂಡ ಬನ್ಸ್ ನ್ನು ಹಾಕಿ ಎರಡೂ ಬದಿಯಲ್ಲಿ ಕಂದು ಬಣ್ಣ ಬರವವರೆಗೆ ಕರಿದು ತೆಗೆದರೆ ರುಚಿಕರವಾದಮಂಗಳೂರು ಬನ್ಸ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com