ಕಡಲೆಕಾಯಿ ಬೀಜದ ಚಿಕ್ಕಿ
ಕಡಲೆಕಾಯಿ ಬೀಜದ ಚಿಕ್ಕಿ

ಕಡಲೆಕಾಯಿ ಬೀಜದ ಚಿಕ್ಕಿ

ನಿಮಿಷಗಳಲ್ಲಿ ಮಾಡಬಹುದಾದ ರುಚಿಕರವಾದ ಕಡಲೆಕಾಯಿ ಬೀಜದ ಚಿಕ್ಕಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
  • ಕಡಲೆಕಾಯಿ ಬೀಜ- 2 ಬಟ್ಟಲು
  • ಬೆಲ್ಲ - 1.5 ಬಟ್ಟಲು
ಮಾಡುವ ವಿಧಾನ...
  • ಬಾಣಲೆ ತೆಗೆದುಕೊಂಡು ಒಲೆಯ ಮೇಲಿಟ್ಟು ಕಡಲೆಬೀಜವನ್ನು ಚೆನ್ನಾಗಿ ಹುರಿಯಬೇಕು. ನಂತರ ಬೀಜದ ಮೇಲಿನ ಹೊಟ್ಟನ್ನು ಸಂಪೂರ್ಣವಾಗಿ ತೆಗೆದಿಟ್ಟುಕೊಳ್ಳಬೇಕು. 
  • ಬಳಿಕ ಇದೇ ಬಾಣಲೆಗೆ ಬೆಲ್ಲ, ಕಾಲು ಲೋಟಕ್ಕಿಂತಲೂ ಕಡಿಮೆ ನೀರು ಹಾಕಿ ಬೆಲ್ಲವನ್ನು ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಬೇಕು. ಬೆಲ್ಲ ಗಟ್ಟಿಯಾಗುವವರೆಗೂ ಹುರಿಯಬೇಕು. 
  • ಬಳಿಕ ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಹುರಿದುಕೊಂಡ ಬೆಲ್ಲದ ಪಾಕದ ಒಂದು ಹನಿಯನ್ನು ಹಾಕಿ. ಬೆಲ್ಲ ಗಟ್ಟಿಯಾದರೆ ಪಾಕ ಸಿದ್ಧವಾಗಿದೆ ಎಂದರ್ಥ. ನಂತರ ಕಡಲೆಕಾಯಿ ಬೀಜವನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 

Related Stories

No stories found.

Advertisement

X
Kannada Prabha
www.kannadaprabha.com