ಖುಷ್ಕಾ

ರುಚಿಕರವಾದ ಖುಷ್ಕಾ ಮಾಡುವ ವಿಧಾನ...

Published: 03rd March 2020 12:57 PM  |   Last Updated: 03rd March 2020 12:57 PM   |  A+A-


Khuska

ಖುಷ್ಕಾ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಬಾಸುಮತಿ ಅಕ್ಕಿ- 1ಬಟ್ಟಲು
 • ಈರುಳ್ಳಿ- ಕತ್ತರಿಸಿದ್ದು 1 ಬಟ್ಟಲು
 • ಟೊಮೆಟೋ- ಕತ್ತರಿಸಿದ್ದು 1 ಬಟ್ಟಲು
 • ಅಚ್ಚ ಖಾರದಪುಡಿ- 2 ಚಮಚ
 • ಅರಿಶಣದ ಪುಡಿ- ಅರ್ಧ ಚಮಚ
 • ದನಿಯಾ ಪುಡಿ- 1 ಚಮಚ
 • ಮೊಸರು- ಮುಕ್ಕಾಲು ಬಟ್ಟಲು
 • ಪಲಾವ್ ಎಲೆ- 3-4
 • ಏಲಕ್ಕಿ- ಸ್ವಲ್ಪ
 • ಚಕ್ಕೆ-ಸ್ವಲ್ಪ
 • ಚಕ್ರ, ಮೊಗ್ಗು - 2
 • ತುಪ್ಪ-ಸ್ವಲ್ಪ
 • ಉಪ್ಪು-ರುಚಿಗೆ ತಕ್ಕಷ್ಟು
 • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಸಾಲೆಗೆ ಬೇಕಾಗುವ ಪದಾರ್ಥಗಳು

 • ಈರುಳ್ಳಿ- 1
 • ಶುಂಠಿ,ಬೆಳ್ಳುಳ್ಳಿ- ಸ್ವಲ್ಪ
 • ಹಸಿಮೆಣಸಿನ ಕಾಯಿ-4
 • ಕೊತ್ತಂಬರಿ ಸೊಪ್ಪು- ಸ್ವಲ್ಪ
 • ಪುದೀನಾ- ಸ್ವಲ್ಪ
 • ಚಕ್ಕೆ, ಲವಂಗ, ಏಲಕ್ಕಿ -ಸ್ವಲ್ಪ

ಮಾಡುವ ವಿಧಾನ...

 • ಮೊದಲಿಗೆ ಅಕ್ಕಿಯನ್ನು 30 ನಿಮಿಷ ನೆನೆಸಿಟ್ಟುಕೊಳ್ಳಬೇಕು. 
 • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಈರುಳ್ಲಿ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು. 
 • ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ತುಪ್ಪ ಹಾಕಿ ಕಾಯಲು ಬಿಡಬೇಕು. ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಪಲಾವ್ ಎಲೆ, ಚಕ್ರ, ಮೊಗ್ಗು ಹಾಕಿ ಕೆಂಪಗೆ ಹುರಿಯಬೇಕು, ನಂತರ ಈರುಳ್ಳಿ, ಟೊಮೆಟೋ ಹಾಕಿ ಹುರಿದುಕೊಳ್ಳಬೇಕು. 
 • ನಂತರ ಅರಿಶಿಣದ ಪುಡಿ, ಅಚ್ಚಖಾರದ ಪುಡಿ, ದನಿಯಾ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಬೇಕು. 
 • ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 5 ನಿಮಿಷ ಬಿಟ್ಟು. ಮೊಸರನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಬೇಕು. 1.1/2ಬಟ್ಟಲು ನೀರು ಹಾಕಿ ಮಧ್ಯಮ ಉರಿಯಲ್ಲಿ ಎರಡು ಕೂಗು ಕೂಗಿದ ಬಳಿಕ ಕುಕ್ಕರ್ ಮುಚ್ಚಳ ತೆಗೆದು, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಖುಷ್ಕಾ ಸವಿಯಲು ಸಿದ್ಧ. 
   
Stay up to date on all the latest ಆಹಾರ-ವಿಹಾರ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp