ತಂದೂರಿ ಮಸಾಲಾ ಪುಡಿ

ತಂದೂರಿ ಮಸಾಲಾ ಪುಡಿ ಮಾಡುವ ವಿಧಾನ...
ತಂದೂರಿ ಮಸಾಲಾ ಪುಡಿ
ತಂದೂರಿ ಮಸಾಲಾ ಪುಡಿ

ಬೇಕಾಗುವ ಪದಾರ್ಥಗಳು

  • ದನಿಯಾ- 1/4 ಬಟ್ಟಲು
  • ಜೀರಿಗೆ- 1 ಚಮಚ
  • ಕಾಳುಮೆಣಸು- 2 ಚಮಚ
  • ಹಸಿರು ಏಲಕ್ಕಿ- 10
  • ಕಪ್ಪು ಏಲಕ್ಕಿ- 2
  • ಚಕ್ಕೆ- 2 
  • ಲವಂಗ - 1 ಚಮಚ
  • ಜಾಯಿಪತ್ರೆ- 2 
  • ಕಾಶ್ಮೀರಿ ರೆಡ್ ಚಿಲ್ಲಿ- 15
  • ಕಸೂರಿ ಮೇಥಿ- 2 ಚಮಚ
  • ಶುಂಠಿ ಪುಡಿ- 1 ಚಮಚ

ಮಾಡುವ ವಿಧಾನ...

  • ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಅದಕ್ಕೆ ದನಿಯಾ ಹಾಕಿ 2 ನಿಮಿಷ ಹುರಿದುಕೊಳ್ಳಬೇಕು. 
  • ನಂತರ ಜೀರಿಗೆ, ಮೆಣಸು, ಏಲಕ್ಕಿ, ಚಕ್ಕೆ, ಲವಂಗ, ಜಾಯಿಕಾಯಿ, ದೊಡ್ಡಪತ್ರೆ, ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ಬಳಿಕ ಮೆಣಿಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಂಡು, ಕೊನೆಯಲ್ಲಿ ಕಸೂರಿ ಮೇಥಿ ಹಾಕಿ ಹುರಿದುಕೊಳ್ಳಿ.
  • ತಣ್ಣಗಾದ ಬಳಿಕ ಮಿಕ್ಸಿ ಜಾರ್'ಗೆ ಶುಂಠಿ ಪುಡಿ ಹಾಗೂ ಎಲ್ಲವನ್ನೂ ಹಾಕಿ ಪುಡಿ ಮಾಡಿಕೊಂಡರೆ ತಂದೂರಿ ಮಸಾಲ ಪುಡಿ ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com