ಕೊಬ್ಬರಿ ಲಾಡು
ಬೇಕಾಗುವ ಪದಾರ್ಥಗಳು...
- ತುಪ್ಪ- ಸ್ವಲ್ಪ
- ತೆಂಗಿನ ಕಾಯಿ ತುರಿ- ಎರಡೂವರೆ ಬಟ್ಟಲು
- ಬೆಲ್ಲ- ಮುಕ್ಕಾಲು ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ಬಿಸಿ ಮಾಡಿ. ನಂತರ ತೆಂಗಿನ ಕಾಯಿ ತುರಿ ಹಾಕಿ ತೇವಾಂಶ ಹೋಗುವವರೆಗೆ ಮಧ್ಯಮ ಅಥವಾ ಸಣ್ಣ ಉರಿಯಲ್ಲಿಟ್ಟು ಹುರಿಯಿರಿ.
- ಬಳಿಕ ಬೆಲ್ಲವನ್ನು ಹಾಕಿ ಕೈಯಾಡಿಸುತ್ತಿರಿ. ಮಿಶ್ರಣವು ಆಕಾರವನ್ನು ಹಿಡಿದಿಡಲು ಪ್ರಾರಂಭಿಸುವವರೆಗೆ ಬೇಯಿಸುವುದನ್ನು ಮುಂದುವರಿಸಿ.
- ನಂತರ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಚ್ಚಗಿರುವಾಗಲೇ ಉಂಡೆಗಳನ್ನು ಮಾಡಿದರೆ ರುಚಿಕರವಾದ ಕೊಬ್ಬರಿ ಲಾಡು ಸವಿಯಲು ಸಿದ್ಧ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ