ಚಿಕನ್ ಚಾಪ್ಸ್

ರುಚಿಕರವಾದ ಚಿಕನ್ ಚಾಪ್ಸ್ ಮಾಡುವ ವಿಧಾನ...
ಚಿಕನ್ ಚಾಪ್ಸ್
ಚಿಕನ್ ಚಾಪ್ಸ್

ಬೇಕಾಗುವ ಪದಾರ್ಥಗಳು...

  • ಬೆಳ್ಳುಳ್ಳಿ – 15-20
  • ಶುಂಠಿ – ಸ್ವಲ್ಪ
  • ಹಸಿ ಮೆಣಸಿನಕಾಯಿ – 8-10
  • ಹೆಚ್ಚಿದ ಈರುಳ್ಳಿ – ಅರ್ಧ ಬಟ್ಟಲು
  • ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಹೆಚ್ಚಿದ ಪುದೀನ – ಮುಕ್ಕಾಲು ಬಟ್ಟಲು
  • ದಾಲ್ಚಿನ್ನಿ (ಚಕ್ಕೆ)– ಸ್ವಲ್ಪ
  • ಲವಂಗ – 8
  • ಕಾಳುಮೆಣಸು – 1 ಚಮಚ
  • ದನಿಯಾ ಪುಡಿ – 2 ಚಮಚ
  • ತುರಿದ ತೆಂಗಿನಕಾಯಿ – ಸ್ವಲ್ಪ
  • ಚಿಕನ್ ತುಂಡುಗಳು – 3/4 ಕೆಜಿ
  • ಹೆಚ್ಚಿದ ಈರುಳ್ಳಿ – 1 ಬಟ್ಟಲು
  • ಹೆಚ್ಚಿದ ಟೊಮೆಟೊ – ಅರ್ಧ ಬಟ್ಟಲು
  • ನಿಂಬೆ ಹಣ್ಣು – ಅರ್ಧ
  • ಎಣ್ಣೆ – 3 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಚಕ್ಕೆ, ಲವಂಗ, ಕಾಳುಮೆಣಸು, ದನಿಯಾ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ.
  • ನಂತರ ಒಲೆಯ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
  • ಈರುಳ್ಳಿ ಚಿನ್ನದ ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ.
  • ಈಗ ಚಿಕನ್ ತುಂಡುಗಳನ್ನು ಹಾಕಿ, ಉಪ್ಪು ಸೇರಿಸಿ ಫ್ರೈ ಮಾಡಿ.
  • ಮೊದಲೇ ರುಬ್ಬಿ ಇಟ್ಟುಕೊಂಡಿದ್ದ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
  • ಚಿಕನ್ ಚೆನ್ನಾಗಿ ಬೆಂದ ಬಳಿಕ ನಿಂಬೆ ರಸವನ್ನು ಹಾಕಿದರೆ, ರುಚಿಕರವಾದ ಚಿಕನ್ ಚಾಪ್ಸ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com