ಟೊಮೆಟೋ ಇಡ್ಲಿ

ರುಚಿಕರವಾದ ಟೊಮೆಟೋ ಇಡ್ಲಿ ಮಾಡುವ ವಿಧಾನ...
ಟೊಮೆಟೋ ಇಡ್ಲಿ
ಟೊಮೆಟೋ ಇಡ್ಲಿ

ಬೇಕಾಗುವ ಪದಾರ್ಥಗಳು...

  • ಟೊಮೆಟೋ- 5-6
  • ಉದ್ದಿನ ಬೇಳೆ - 1 ಲೋಟ
  • ಇಡ್ಲಿ ರವೆ - 2 ಲೋಟ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ

ಮಾಡುವ ವಿಧಾನ...

  • ಉದ್ದಿನ ಬೇಳೆ ಮತ್ತು ಇಡ್ಲಿ ರವೆಯನ್ನು ಪ್ರತ್ಯೇಕವಾಗಿ ನೀರು ಹಾಕಿ 3 ಗಂಟೆಗಳ ಕಾಲ ನೆನೆಸಿಡಿ.
  • ಬಳಿಕ ಉದ್ದಿನ ಬೇಳೆ ಮಿಕ್ಸಿ ಜಾರ್'ಗೆ ಹಾಯಿ ನಯವಾಗಿ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಇಡ್ಲಿ ರವೆ ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಮುಚ್ಚಿಡಿ. ರಾತ್ರಿಯಿಡೀ ಹಿಟ್ಟನ್ನು ಹಾಗೆಯೇ ಬಿಡಿ.
  • ಬೆಳಿಗ್ಗೆಟೊಮೆಟೋವನ್ನು ರುಬ್ಬಿ ರಸ ತೆಗೆದುಕೊಂಡು ಹಿಟ್ಟಿನ ಜೊತೆ ಸೇರಿಸಿ. ಹಿಟ್ಟು ತೀರಾ ತೆಳ್ಳಗಾಗದಂತೆ ನೋಡಿಕೊಳ್ಳಿ. ಈಗ ಇಡ್ಲಿ ಪ್ಲೇಟ್‌ಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿದರೆ, ಟೊಮೆಟೋ ಇಡ್ಲಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com