ಚಿಕನ್ ಚೀಸ್ ಬರ್ಗರ್

ರುಚಿಕರವಾದ ಚಿಕನ್ ಚೀಸ್ ಬರ್ಗರ್ ಮಾಡುವ ವಿಧಾನ...
ಚಿಕನ್ ಚೀಸ್ ಬರ್ಗರ್
ಚಿಕನ್ ಚೀಸ್ ಬರ್ಗರ್

ಬೇಕಾಗುವ ಪದಾರ್ಥಗಳು...

  • ಬರ್ಗರ್ ಬನ್ -2
  • ಚಿಕನ್ - ಸಣ್ಣಗೆ ಕತ್ತರಿಸಿದ್ದು 250 ಗ್ರಾಂ
  • ಮಲ್ಟಿಗ್ರೇನ್ ಬ್ರೆಡ್ - 1 ಸ್ಲೈಸ್
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು, ಸ್ವಲ್ಪ
  • ಶುಂಠಿ- ಸಣ್ಣಗೆ ಕತ್ತರಿಸಿದ್ದು, ಸ್ವಲ್ಪ
  • ಎಲೆಕೋಸ್- ಸ್ವಲ್ಪ
  • ಪುದೀನಾ - ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಮೊಟ್ಟೆ - 1
  • ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಕಾರ್ನ್ ಫ್ಲೋರ್ - 1 ಚಮಚ
  • ಕಾಳು ಮೆಣಸಿನ ಪುಡಿ- ಸ್ವಲ್ಪ
  • ಚೀಸ್ ಸ್ಲೈಸ್- ಸ್ವಲ್ಪ

ಮಾಡುವ ವಿಧಾನ....

  • ಮಲ್ಟಿಗ್ರೇನ್ ಬ್ರೆಡ್, ಬೆಳ್ಳುಳ್ಳಿ, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸಣ್ಣಗೆ ಹೆಚ್ಚಿಕೊಳ್ಳಿ, ಫುಡ್ ಪ್ರಾಸೆಸರ್ ಇದ್ದರೆ ಅದಕ್ಕೆ ಹಾಕಿ ಸಣ್ಣಗೆ ಕತ್ತರಿಸಿಕೊಳ್ಳಿ.
  • ಕತ್ತರಿಸಿದ ಮಿಶ್ರಣವನ್ನು ಸಣ್ಣಗೆ ಕೊಚ್ಚಿಕೊಂಡ ಚಿಕನ್ ಜೊತೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಇದಕ್ಕೆ ಮೊಟ್ಟೆ, ಒಂದು ಚಮಚ ಕಾರ್ನ್ ಪ್ಲೋರ್ ಹಾಕಿ. ಅಗತ್ಯವಿರುವಷ್ಟು ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಪ್ಯಾನ್ ವೊಂದಕ್ಕೆ ಎಣ್ಣೆ ಅಥವಾ ಬೆಣ್ಣ ಹಾಕಿ ಮಿಶ್ರಣವನ್ನು ಹಾಕಿ ಹುರಿದುಕೊಳ್ಳಿ.
  • ಬಳಿಕ ಬರ್ಗರ್ ಬನ್ ನ್ನು ಟೋಸ್ಟ್ ಮಾಡಿಕೊಳ್ಳಿ. ಟೋಸ್ಟ್ ಮಾಡಿದ ಒಂದು ಸ್ಲೈಸ್ ಬನ್ ಒಳ ಭಾಗದಲ್ಲಿ ನಿಮಗೆ ಬೇಕಾದ ಸಾಸ್ ಹಾಕಿ ನಂತರ ಎಲೆಕೋಸಿನ ಎಲೆಗಳನ್ನು ಇಡಿ. ಬಳಿಕ ಎಣ್ಣೆಯಲ್ಲಿ ಹುರಿದುಕೊಂಡ ಮಸಾಲೆ ಪದಾರ್ಥವನ್ನು ಹಾಕಿ, ಚೀಸ್ ಸ್ಲೈಸ್ ಗಳನ್ನು ಇಡಿ. ಬಳಿಕ ಈರುಳ್ಳಿ ಹಾಗೂ ಟೊಮ್ಯಾಟೋ ಸ್ಲೈಸ್ ಗಳನ್ನು ಇಟ್ಟು, ಮತ್ತೊಂದು ಸ್ಲೈಸ್ ಚೀಸ್ ಇಡಿ. ಬಳಿಕ ಮತ್ತೊಮ್ಮೆ ನಿಮಗಿಷ್ಟವಾದ ಸಾಸ್ ಹಾಕಿ. ಇದೀಗ ಸ್ಲೈಸ್ ಬನ್ ತೆಗೆದುಕೊಂಡು ಮುಚ್ಚಿದರೆ, ರುಚಿಕರವಾದ ಚಿಕನ್ ಚೀಸ್ ಬರ್ಗರ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com