ಮಾವಿನ ಹಣ್ಣಿನ ಜೆಲ್ಲಿ

ರುಚಿಕರವಾದ ಮಾವಿನ ಹಣ್ಣಿನ ಜೆಲ್ಲಿ ಮಾಡುವ ವಿಧಾನ...
ಮಾವಿನ ಹಣ್ಣಿನ ಜೆಲ್ಲಿ
ಮಾವಿನ ಹಣ್ಣಿನ ಜೆಲ್ಲಿ

ಬೇಕಾಗುವ ಪದಾರ್ಥಗಳು...

  • ಮಾವಿನಹಣ್ಣಿನ ತಿಳಿ ರಸ- ಅರ್ಧ ಬಟ್ಟಲು
  • ಸಕ್ಕರೆ - ಒಂದು ಬಟ್ಟಲು
  • ಕಾರ್ನ್ ಫ್ಲೋರ್- 1 ಚಮಚ
  • ತುಪ್ಪ- ಒಂದು ಚಮಚ

ಮಾಡುವ ವಿಧಾನ...

  • ಅರ್ಧ ಕಪ್ ನೀರಿನಲ್ಲಿ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಾವಿನ ಹಣ್ಣಿನ ರಸಕ್ಕೆ ಬೆರೆಸಿಕೊಳ್ಳಿ.
  • ಬಾಣಲೆಯಲ್ಲಿ ಸಕ್ಕರೆಗೆ ಒಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಸಂಪೂರ್ಣ ಕರಗಿ ನೊರೆಯಾಡುವಾಗ ಮಾವಿನರಸದ ಮಿಶ್ರಣ, ತುಪ್ಪ ಸೇರಿಸಿ ಕೈಯಾಡಿಸುತ್ತಿರಿ.
  • ಮಿಶ್ರಣ ತಳ ಬಿಡುವಾಗ ತುಪ್ಪ ಸವರಿದ ತಟ್ಟೆಯಲ್ಲಿ ಸುರಿಯಿರಿ. ತಣ್ಣಗಾದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಮ್ಯಾಂಗೊ ಜೆಲ್ಲಿ ಸವಿಯಲು ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com