ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಅಗತ್ಯವಿರುವಷ್ಟು ಉಪ್ಪು ಸೇರಿ, 8-10 ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ.
ನಂತರ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಒಲೆಯ ಮೇಲೆ ಕಾವಲಿ ಇಟ್ಟು ಕಾವಲಿ ಬಿಸಿಯಾದ ನಂತರ ತುಪ್ಪ ಅಥವಾ ಎಣ್ಣೆ ಸವರಿ, ಹಿಟ್ಟನ್ನು ಕಾವಲಿಯ ಮೇಲೆ ಹುಯ್ದು ಇದರ ಮೇಲೆ ಈರುಳ್ಳಿ ಮಿಶ್ರಣವನ್ನು ಹಾಕಿ ನಿಧಾನವಾಗಿ ಒತ್ತಿರಿ. ನಂತರ ಉತ್ತಪ್ಪದ ಸುತ್ತ 1 ಚಮಚ ಎಣ್ಣೆಯನ್ನು ಸೇರಿಸಿ. ಅದನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 1-2 ನಿಮಿಷ ಬೇಯಲು ಬಿಡಿ. ಉತ್ತಪ್ಪ ಚಿನ್ನದ ಕಂದು ಬಣ್ಣಕ್ಕೆ ತಿರುಗಿದ ನಂತರ ಇನ್ನೊಂದು ಬದಿಯನ್ನು ತಿರುಗಿಸಿ ಕೆಂಪಗೆ ಬೇಯಿಸಿದರೆ, ರುಚಿಕರವಾದ ಉತ್ತಪ್ಪ ಸವಿಯಲು ಸಿದ್ಧ.