ಕಬ್ಬಿನ ಹಾಲಿನ ಹಲ್ವ
ಬೇಕಾಗುವ ಪದಾರ್ಥಗಳು...
- ಕಬ್ಬಿನ ಹಾಲು- ಅರ್ಧ ಲೀಟರ್
- ಅಕ್ಕಿ- ಒಂದು ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ತುಪ್ಪ-ಸ್ವಲ್ಪ
- ಬೆಲ್ಲ-ಸ್ವಲ್ಪ
ಮಾಡುವ ವಿಧಾನ...
- ಅಕ್ಕಿಯನ್ನು ತೊಳೆದು ಸ್ವಲ್ಪ ನೀರಿನಲ್ಲಿ 2 ಗಂಟೆ ನೆನೆಸಿಡಿ. ನಂತರ ಇದನ್ನು ಅರ್ಧದಷ್ಟು ಕಬ್ಬಿನ ರಸದ ಜೊತೆ ಸೇರಿಸಿ. ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ದಪ್ಪ ಬಾಣಲೆಗೆ ಮಿಶ್ರಣವನ್ನು ಹಾಕಿ ಉಳಿದ ಕಬ್ಬಿನ ರಸ ಸೇರಿಸಿ. ಸ್ವಲ್ಪ ಬೆಲ್ಲ ಸೇರಿಸಿ ತಳ ಬಿಡುವವರೆಗೆ ಕಾಯಿಸಿ.
- ಬೆಂದ ನಂತರ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ ಸಮನಾಗಿ ಹರಡಿಕೊಳ್ಳಿ. .ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಕಬ್ಬಿನ ಹಾಲಿನ ಹಲ್ವ ಸವಿಯಲು ಸಿದ್ಧ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ