ಆಲೂ ಪಾಲಕ್ ಕಟ್ಲೆಟ್

ರುಚಿಕರವಾದ ಆಲೂ ಪಾಲಕ್ ಕಟ್ಲೆಟ್ ಮಾಡುವ ವಿಧಾನ...
ಆಲೂ ಪಾಲಕ್ ಕಟ್ಲೆಟ್
ಆಲೂ ಪಾಲಕ್ ಕಟ್ಲೆಟ್
Updated on

ಬೇಕಾಗುವ ಪದಾರ್ಧಗಳು...

  • ಆಲೂಗಡ್ಡೆ – 2
  • ಪಾಲಕ್ ಸೊಪ್ಪು – 1 ಬಟ್ಟಲು
  • ಈರುಳ್ಳಿ – 1
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಜೀರಿಗೆ – 1/4 ಚಮಚ
  • ಗರಂ ಮಸಾಲಾ – 1 ಚಮಚ
  • ಅರಿಶಿನ ಪುಡಿ – ಒಂದು ಚಿಟಿಕೆ
  • ಅಕ್ಕಿ ಹಿಟ್ಟು – 1 ಚಮಚ
  • ಮೆಣಸಿನ ಪುಡಿ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್'ಗೆ ಹಾಕಿ. ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಅವುಗಳ ಸಿಪ್ಪೆಯನ್ನು ತೆಗೆಯಿರಿ. ಪಕ್ಕಕ್ಕೆ ಇಡಿ.
  • ಈಗ ಈರುಳ್ಳಿ ಮತ್ತು ಪಾಲಕ್ ಸೊಪ್ಪನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
  • ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.
  • ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಪಾಲಕ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಗರಂ ಮಸಾಲ, ಅರಿಶಿನ ಪುಡಿ, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಕಟ್ಲೆಟ್‌ಗಳನ್ನು ಕರಿಯಲು ದೊಡ್ಡ ಬಾಣಲೆಯನ್ನು ಒಲೆಯ ಮೇಲೆ ಇಟ್ಟು, ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ.
  • ಎಣ್ಣೆ ಚೆನ್ನಾಗಿ ಕಾಯುತ್ತಿದ್ದಂತೆ ತಯಾರಾದ ಕಟ್ಲೆಟ್ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ಮಾಡಿಕೊಂಡು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇದೀಗ ಬಿಸಿಬಿಸಿ ಆಲೂ ಪಾಲಕ್ ಕಟ್ಲೆಟ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com