ಮಾವಿನಕಾಯಿ ಚಿತ್ರಾನ್ನ
ಮಾವಿನಕಾಯಿ ಚಿತ್ರಾನ್ನ

ಯುಗಾದಿ ಸ್ಪೆಷಲ್ ಮಾವಿನಕಾಯಿ ಚಿತ್ರಾನ್ನ

ರುಚಿಕರವಾದ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

 • ಮಾವಿನಕಾಯಿ – 1 (ತುರಿದಿಟ್ಟುಕೊಂಡದ್ದು)

 • ಎಣ್ಣೆ – 5-6 ಚಮಚ

 • ಹಸಿಮೆಣಸಿನಕಾಯಿ – 4-5

 • ಕಡಲೆಕಾಯಿ ಬೀಜ – 4 ಚಮಚ

 • ಕೊತ್ತಂಬರಿ ಸೊಪ್ಪು – ಸ್ವಲ್ಪ

 • ಕರಿಬೇವಿನ ಸೊಪ್ಪು – ಸ್ವಲ್ಪ

 • ಸಾಸಿವೆ – ಅಗತ್ಯಕ್ಕೆ ತಕ್ಕಷ್ಟು

 • ಅರಿಶಿನ ಪುಡಿ – ಅಗತ್ಯಕ್ಕೆ ತಕ್ಕಷ್ಟು

 • ಜೀರಿಗೆ -1 ಚಮಚ

 • ಕಡ್ಲೆಬೇಳೆ -2 ಚಮಚ

 • ಉದ್ದಿನಬೇಳೆ – 2 ಚಮಚ

 • ಉಪ್ಪು- ರುಚಿಗೆ ತಕ್ಕಷ್ಟು

 • ಅನ್ನ- ಒಂದು ಬಟ್ಟಲು

 • ಮಾಡುವ ವಿಧಾನ...

 • ಮೊದಲಿಗೆ ಬಾಣಲೆಗೆ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಅದಕ್ಕೆ ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆಯನ್ನೂ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ.

 • ಈಗ ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಳ್ಳಿ. ಉಪ್ಪು ಸೇರಿಸಿ ತುರಿದಿಟ್ಟ ಮಾವಿನಕಾಯಿಯನ್ನು ಹಾಕಿ 1 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ.

 • ನಂತರ ಅರಿಶಿನ ಪುಡಿ ಸೇರಿಸಿಕೊಂಡು ಚನ್ನಾಗಿ ಮಿಶ್ರಮ ಮಾಡಿ, ಗ್ಯಾಸ್ ಆಫ್ ಮಾಡಿ.

 • ಈಗ ಚಿಕ್ಕ ಕಡಾಯಿಯಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಕಡ್ಲೆಬೀಜಗಳನ್ನು ಬಣ್ಣ ಬದಲಾಗುವ ತನಕ ಹುರಿದುಕೊಂಡು ಬಾಣಲೆಗೆ ಸೇರಿಸಿಕೊಂಡು ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

 • ನಂತರ ಅನ್ನವನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರ ಮಾಡಿದರೆ ರುಚಿಕರವಾದ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.

Related Stories

No stories found.

Advertisement

X
Kannada Prabha
www.kannadaprabha.com