
ತಂಬಿಟ್ಟು
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಪಾವು
ಬೆಲ್ಲದ ಪುಡಿ – 2 ಬಟ್ಟಲು
ಕಾಯಿತುರಿ –2 ಬಟ್ಟಲು
ಏಲಕ್ಕಿಪುಡಿ – ಸ್ವಲ್ಬ
ಮಾಡುವ ವಿಧಾನ...
ಅಕ್ಕಿಯನ್ನು ಒಂದು ಗಂಟೆ ನೆನಸಿಟ್ಟು, ನೀರು ಬಸಿದು, ಕಾಟನ್ ಬಟ್ಟೆ ಮೇಲೆ ನೆರಳಿನಲ್ಲಿ ಒಣಗಲು ಬಿಡಿ.
ಬಳಿಕ ಕುಟ್ಟಿ ಜರಡಿ ಹಿಡಿಯಿರಿ. ಆ ಸಣ್ಣ ಹಿಟ್ಟಿಗೆ, ಕಾಯಿತುರಿ, ಬೆಲ್ಲದಪುಡಿ, ಏಲಕ್ಕಿಪುಡಿ ಹಾಕಿ, ಕುಟ್ಟಿ, ಬಳಿಕ ಉಂಡೆ ಕಟ್ಟಿಡಿ. (ನೀರು ಸೇರಿಸಬೇಡಿ. ಕಾಯಿತುರಿ ಹಾಗೂ ಬೆಲ್ಲದಿಂದಲೇ ಅಂಟು ಬಂದು ಉಂಡೆ ಕಟ್ಟಬಹುದು).
ಚಿಗಳಿ
ಬೇಕಾಗುವ ಪದಾರ್ಥಗಳು...
ಕರಿಎಳ್ಳು – 1 ಬಟ್ಟಲು
ಬೆಲ್ಲದಪುಡಿ –1/4 ಬಟ್ಟಲು
ಮಾಡುವ ವಿಧಾನ...
ಎಳ್ಳನ್ನು ಕಮ್ಮಗೆ ಹುರಿದು, ಬೆಲ್ಲದಪುಡಿ ಸೇರಿಸಿ ಕುಟ್ಟಿ ಉಂಡೆ ಕಟ್ಟಿ. (ನಾಗಪ್ಪನಿಗೆ ನೈವೇದ್ಯಕ್ಕೆ ಮಾತ್ರ, ಹಸಿಎಳ್ಳನ್ನೇ ಕುಟ್ಟಿ, ಬೆಲ್ಲ ಸೇರಿಸಿ ಉಂಡೆ ಕಟ್ಟಿ.)
Advertisement