ಸಿಹಿ ಪೇಡ - Sweet Peda Recipe in Kannada

ರುಚಿಕರವಾದ ಸಿಹಿ ಪೇಡ ಮಾಡುವ ವಿಧಾನ...
ಸಿಹಿ ಪೇಡ
ಸಿಹಿ ಪೇಡ

ಬೇಕಾಗುವ ಪದಾರ್ಥಗಳು...

  • ಹಾಲಿನ ಪುಡಿ- 1 ಬಟ್ಟಲು

  • ಸಕ್ಕರೆ ಪುಡಿ- 3/4 ಬಚ್ಚಲು

  • ತುಪ್ಪ- 2 ಚಮಚ

  • ಹಾಲು - 1/2 ಬಟ್ಟಲು

  • ಏಲಕ್ಕಿ ಪುಡಿ- ಸ್ವಲ್ಪ

ಮಾಡುವ ವಿಧಾನ...

  • ಮೊದಲು ಒಂದು ಪ್ಯಾನ್ ನಲ್ಲಿ 1 ಚಮಚ ತುಪ್ಪ ಹಾಕಿ ಕರಗಿಸಿ ನಂತರ ಹಾಲು ಸಕ್ಕರೆ ಪುಡಿ ಹಾಕಿ. ಸಕ್ಕರೆ ಕರಗಿದ ಮೇಲೆ ಹಾಲಿನ ಪುಡಿ, ಏಲಕ್ಕಿ ಪುಡಿ ಉದುರಿಸಿ ಚೆನ್ನಾಗಿ ಗಂಟಾಗದ ಹಾಗೆ ಕೈಯಾಡಿಸಿ.

  • ಮತ್ತೊಂದು ಚಮಚ ತುಪ್ಪ ಹಾಕಿ ತಳ ಬಿಡುವವರೆಗೂ ಮಿಶ್ರಣ ಮಾಡುತ್ತಲೇ ಇರಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ ಪೇಡ ಬೇಕಾದ ಆಕಾರದಲ್ಲಿ ಸಿದ್ಧ ಪಡಿಸಿದರೆ ರುಚಿಯಾದ ಪೇಡ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com