ಬಾದಾಮಿ ಹಾಲು

ರುಚಿಕರ ಹಾಗೂ ಆರೋಗ್ಯಕರವಾದ ಬಾದಾಮಿ ಹಾಲು ಮಾಡುವ ವಿಧಾನ...
ಬಾದಾಮಿ ಹಾಲು
ಬಾದಾಮಿ ಹಾಲು

ಬೇಕಾಗುವ ಸಾಮಾಗ್ರಿಗಳು...

  • ಬಾದಾಮಿ- 30

  • ಹಾಲು- 3 ಬಟ್ಟಲು

  • ಸಕ್ಕರೆ- 4 ಚಮಚ

  • ಏಲಕ್ಕಿ- 3

  • ಕೇಸರಿ ದಳ- ಸ್ವಲ್ಪ

  • ತುಪ್ಪ-ಸ್ವಲ್ಪ

  • ಬಾದಾಮಿ, ಪಿಸ್ತಾ, ಗೋಡಂಬಿ ಚೂರುಗಳು

ಮಾಡುವ ವಿಧಾನ...

  • ಬಾದಾಮಿಯನ್ನು ಒಂದು ಅಗಲವಾದ ಬೌಲ್ ಗೆ ನೀರು ಹಾಕಿ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಇದರ ಸಿಪ್ಪೆ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಹಾಲು, ಏಲಕ್ಕಿ, ಸಕ್ಕರೆ, ಕೇಸರಿ ದಳ ಸೇರಿಸಿ ರುಬ್ಬಿಕೊಳ್ಳಿ.

  • ನಂತರ ಹಾಲನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಬಾದಾಮಿ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದು ಕುದಿಯಲು ಶುರುವಾದಾಗ ಗ್ಯಾಸ್ ನ ಉರಿ ಸಣ್ಣಗೆ ಮಾಡಿಕೊಂಡು ಮತ್ತೊಮ್ಮೆ ಕುದಿಸಿ ಗ್ಯಾಸ್ ಆಫ್ ಮಾಡಿ.

  • ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಫ್ರೈ ಮಾಡಿಕೊಂಡು ಮಿಶ್ರಣ ಮಾಡಿದರೆ, ರುಚಿಕರವಾದ ಬಾದಾಮಿ ಹಾಲು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com