ಪುಳಿಯೋಗರೆ ಗೊಜ್ಜಿನ ಪುಡಿ- Puliyogare powder Recipe in Kannada

ರುಚಿಕರವಾದ ಪುಳಿಯೋಗರೆ ಗೊಜ್ಜಿಗೆ ಪುಡಿ ಮಾಡುವ ವಿಧಾನ...
ಪುಳಿಯೋಗರೆ ಗೊಜ್ಜಿಗೆ ಪುಡಿ
ಪುಳಿಯೋಗರೆ ಗೊಜ್ಜಿಗೆ ಪುಡಿ
Updated on

ಬೇಕಾಗುವ ಪದಾರ್ಥಗಳು...

  • ದನಿಯಾ - 100 ಗ್ರಾಂ

  • ಬ್ಯಾಡಗಿ ಒಣಮೆಣಸಿನಕಾಯಿ- 100 ಗ್ರಾಂ

  • ಜೀರಿಗೆ- 4 ಚಮಚ

  • ಮೆಂತ್ಯೆ - 3 ಚಮಚ

  • ಕಾಳು ಮೆಣಸು- 2 ಚಮಚ

  • ಒಣಕೊಬ್ಬರಿ- ಸ್ವಲ್ಪ

  • ಎಳ್ಳು-8 ಚಮಚ

  • ಇಂಗು- 2 ಚಿಟಿಕೆಯಷ್ಟು

  • ಸಾಸಿವೆ- 3 ಚಮಚ

  • ಕರಿಬೇವು- ಸ್ವಲ್ಪ

ಮಾಡುವ ವಿಧಾನ...

  • ಮೊದಲು ಬಾಣಲೆ ಬಿಸಿ ಮಾಡಿ, ಎಳ್ಳನ್ನು ಹುರಿಯಿರಿ, ಬಳಿಕ ಕೊಬ್ಬರಿ ತುರಿಯನ್ನು ಹಾಕಿ ಹುರಿಯಿರಿ. ಎಳ್ಳು ಸಿಡಿಯಲು ಆರಂಭಿಸಿದಾಗ ಮತ್ತು ಕೊಬ್ಬರಿ ಬಣ್ಣ ಬದಲಾಗಲು ಆರಂಭವಾಗುತ್ತಿದ್ದಂತೆ ಒಲೆ ಆರಿಸಿ. ಅದನ್ನು ಬಾಣಲೆಯಿಂದ ತೆಗೆಯಿರಿ.

  • ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಮೆಣಸಿನಕಾಯಿ, ದನಿಯಾ, ಮೆಂತ್ಯೆ , ಜೀರಿಗೆ, ಕರಿಬೇವಿನ ಎಲೆ ಸೇರಿ ಎಲ್ಲಾ ಪದಾರ್ಥಗಳನ್ನು ಒಂದಾದ ಮೇಲೆ ಒಂದು ಹುರಿಯಿರಿ.

  • ಹುರಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.

  • ತಣ್ಣಗಾದ ಬಳಿಕ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದೀಗ ಪುಳಿಯೋಗರೆ ಗೊಜ್ಜಿಗೆ ಪುಡಿ ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com