ಸ್ವೀಟ್‌ ಕಾರ್ನ್ ಲಾಲಿಪಾಪ್ - Sweet corn lollipop Recipe in Kannada

ರುಚಿಕರವಾದ ಸ್ವೀಟ್‌ ಕಾರ್ನ್ ಲಾಲಿಪಾಪ್ ಮಾಡುವ ವಿಧಾನ...
ಸ್ವೀಟ್‌ ಕಾರ್ನ್ ಲಾಲಿಪಾಪ್
ಸ್ವೀಟ್‌ ಕಾರ್ನ್ ಲಾಲಿಪಾಪ್
Updated on

ಬೇಕಾಗುವ ಪದಾರ್ಥಗಳು...

  • ಆಲೂಗಡ್ಡೆ- 1-2

  • ಸ್ವೀಟ್‌ ಕಾರ್ನ್- 2 ಬಟ್ಟಲು (ಬೇಯಿಸಿದ್ದು)

  • ಕ್ಯಾಪ್ಸಿಕಂ-1

  • ಈರುಳ್ಳಿ-2-3 (ಸಣ್ಣಗೆ ಕತ್ತರಿಸಿದ್ದು)ಕಡಲೆ ಹಿಟ್ಟು

  • ಕಡಲೆ ಹಿಟ್ಟು- 1 ಬಟ್ಟಲು

  • ಅಕ್ಕಿ ಹಿಟ್ಟು- ಅರ್ಧ ಬಟ್ಟಲು

  • ಗರಂಮಸಾಲೆ ಪುಡಿ- 1 ಚಮಚ

  • ಕಾಳುಮೆಣಿಸಿನ ಪುಡಿ- ಅರ್ಧ ಚಮಚ

  • ಪುದೀನಾ- ಸ್ವಲ್ಪ

  • ಹಸಿಮೆಣಸಿನ ಕಾಯಿ- 2-3

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಉಪ್ಪು-ರುಚಿಗೆ ತಕ್ಕಷ್ಟು

  • ಬ್ರೆಡ್ ಕ್ರಮ್ಸ್- ಅರ್ಧ ಬಟ್ಟಲು

  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಆಲೂಗಡ್ಡೆಯನ್ನು ಬೇಯಿಸಿ ಪುಡಿ ಮಾಡಿ. ಬೇಯಿಸಿದ ಸಿಹಿ ಜೋಳ ರುಬ್ಬಿ ಪಾತ್ರೆಗೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯೊಂದಿಗೆ ಮಿಶ್ರಣ ಮಾಡಿ.

  • ಬಳಿಕ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಈರುಳ್ಳಿ ಹಾಕಿ. ನಂತರ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಗರಂಮಸಾಲೆ, ಕಾಳು ಮೆಣಸಿನ ಪುಡಿ, ಪುದೀನಾ, ಹಸಿಮೆಣಸಿನ ಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಫ್ರಿಡ್ಜ್‌ನಲ್ಲಿಡಿ.

  • ಬಳಿಕ ಸಣ್ಣ ಉಂಡೆ ಮಾಡಿ. ಬ್ರೆಡ್ ಕ್ರಮ್ಸ್ ಅಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ. ಚಿನ್ನದ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆಯಿರಿ. ಇದೀಗ ಈ ಉಂಡೆಗಳಿಗೆ ಟೂತ್ ಪಿಕ್ ಗಳನ್ನು ಚುಚ್ಚಿ ಅಲಂಕರಿಸಿದರೆ ರುಚಿಕರವಾದ ಸ್ವೀಟ್‌ ಕಾರ್ನ್ ಲಾಲಿಪಾಪ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com