

ಬೇಕಾಗುವ ಪದಾರ್ಥಗಳು..
ಗೋಡಂಬಿ- 1 ಬಟ್ಟಲು
ಕಡಲೆಹಿಟ್ಟು- ಮುಕ್ಕಾಲು ಬಟ್ಟಲು
ಅಕ್ಕಿ ಹಿಟ್ಟು- 1 ಚಮಚ
ಅರಿಶಿನ ಪುಡಿ, 1 ಚಮಚ
ಖಾರದ ಪುಡಿ- ಅರ್ಧ ಚಮಚ
ಚಾಟ್ ಮಸಾಲ- ಸ್ವಲ್ಬ
ಇಂಗು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
ಮೊದಲಿಗೆ ಒಂದು ಬೌಲ್ ಗೆ ಗೋಡಂಬಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಖಾರದ ಪುಡಿ, ಚಾಟ್ ಮಸಾಲ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ 2 ಚಮಚ ನೀರು ಸೇರಿಸಿ ಮಿಶ್ರಣ ಮಾಡಿ.
ಈ ಮಿಶ್ರಣ ಸ್ವಲ್ಪ ದಪ್ಪಗೆ ಇರಲಿ. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಗೋಡಂಬಿಯನ್ನು ಒಂದೊಂದೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.
ಇದೀಗ ರುಚಿಕರವಾದ ಮಸಾಲ ಗೋಡಂಬಿ ಫ್ರೈ ಸವಿಯಲು ಸಿದ್ಧ.
Advertisement