
ಬೇಕಾಗುವ ಪದಾರ್ಥಗಳು...
ಹೆಸರುಕಾಳು- ಒಂದು ಬಟ್ಟಲು
ಅಕ್ಕಿ- ಅರ್ಧ ಬಟ್ಟಲು
ತೆಂಗಿನಕಾಯಿತುರಿ- ಕಾಲು ಬಟ್ಟಲು
ಕಡಲೆ ಬೇಳೆ-ಒಂದು ಚಮಚ
ಶುಂಠಿ-ಒಂದು ಅಂಗುಲ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಹೆಸರುಕಾಳು, ಅಕ್ಕಿ, ಕಡಲೆ ಬೇಳೆ ಎಲ್ಲವನ್ನೂ ಬೇರೆ ಬೇರೆಯಾಗಿ 5-6 ಗಂಟೆಗಳ ಕಾಲ ನೆನೆಸಿಕೊಳ್ಳಿ.
ನಂತರ ನೀರು ತೆಗೆದು, ಕಾಯಿತುರಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ ಹಿಟ್ಟನ್ನು ಹದ ಮಾಡಿಕೊಂಡು ಹತ್ತು ನಿಮಿಷ ನೆನೆಯಲು ಬಿಡಿ.
ಇದೀಗ ಒಲೆಯ ಮೇಲೆ ನಾನ್‌ಸ್ಟಿಕ್ ತವಾದ ಇಟ್ಟು, ತೆಳುವಾಗಿ ದೋಸೆ ಹೊಯ್ದು ಎರಡೂ ಬದಿಯಲ್ಲೂ ಬೇಯಿಸಿರಿ. ಇದನ್ನು ಬಿಸಿ ಇರುವಾಗಲೆ ಕಾಯಿಚಟ್ನಿಯೊಂದಿಗೆ ಸವಿಯಿರಿ.
Advertisement