

ಬೇಕಾಗುವ ಪದಾರ್ಥಗಳು...
ಮ್ಯಾಗಿ ಪ್ಯಾಕೆಟ್- 2
ಈರುಳ್ಳಿ - 1 (ಸಣ್ಣಗೆ ಕತ್ತರಿಸಿದ್ದು)
ಜೋಳ (ಕಾರ್ನ್)- 1 ಸಣ್ಣ ಬಟ್ಟಲು
ಕ್ಯಾರೆಟ್- 1 (ತೆಳುವಾದ ಉದ್ದಗೆ ಕಟ್ ಮಾಡಿದ್ದು)
ಕ್ಯಾಪ್ಸಿಕಮ್- 1 (ಸಣ್ಣಗೆ ಕತ್ತರಿಸಿದ್ದು)
ಟೊಮೆಟೊ - 1 (ಸಣ್ಣಗೆ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ-1 (ಸಣ್ಣಗೆ ಕತ್ತರಿಸಿದ)
ಉಪ್ಪು- ರುಚಿಗೆ ತಕ್ಕಷ್ಟು
ನೀರು- ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದಾಗ ಈರುಳ್ಳಿ, ಕ್ಯಾರೆಟ್, ಕಾರ್ನ್, ಟೊಮೆಟೊ, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಮ್ಯಾಗಿ ಮಸಾಲೆಯನ್ನು ಹಾಕಿ ಕುದಿಯಲು ಬಿಡಿ.
ತರಕಾರಿ ಬೇಯುತ್ತಿದ್ದಂತೆ ಮ್ಯಾಗಿ ಹಾಗೂ ಉಳಿದ ಮ್ಯಾಗಿ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸೂಪ್ ನಂತೆ ಮ್ಯಾಗಿ ತಿನ್ನಲು ಬಯಸಿದ್ರೆ ಸ್ವಲ್ಪ ನೀರಿರುವಾಗ್ಲೇ ಗ್ಯಾಸ್ ಆರಿಸಿ. ಇದೀಗ ರುಚಿಕರವಾದ ಕಾರ್ನ್ ಮ್ಯಾಗಿ ಸವಿಯಲು ಸಿದ್ಧ.
Advertisement