

ಬೇಕಾಗುವ ಪದಾರ್ಥಗಳು...
ದನಿಯಾ - 2 ಚಮಚ
ಜೀರಿಗೆ - ಅರ್ಧ ಚಮಚ
ಸೋಂಪು- 1 ಚಮಚ
ಕಾಳು ಮೆಣಸು- 1 ಚಮಚ
ಓಂಕಾಳು- ಅರ್ಧ ಚಮಚ
ಒಣ ಶುಂಠಿ- 1 ಚಮಚ
ಒಣ ಪುದೀನಾ- 1 ಚಮಚ
ಬ್ಲ್ಯಾಕ್ ಸಾಲ್ಟ್- 1 ಚಮಚ
ಆಮ್ಚೂರ್ ಪುಡಿ- 1 ಚಮಚ
ಇಂಗು- 1 ಚಮಚ
ಉಪ್ಪು- ಅರ್ಧ ಚಮಚ
ಮಾಡುವ ವಿಧಾನ...
ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ದನಿಯಾ, ಜೀರಿಗೆ, ಸೋಂಪು, ಕಾಳು ಮೆಣಸು, ಓಂಕಾಳು, ಒಣ ಶುಂಠಿ ಹಾಗೂ ಒಣ ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ.
ಬಳಿಕ ಮಿಕ್ಸಿ ಜಾರ್'ಗೆ ಹಾಕಿ. ಇದಕ್ಕೆ ಬ್ಲ್ಯಾಕ್ ಸಾಲ್ಟ್, ಆಮ್ಚೂರ್ ಪುಡಿ, ಇಂಗು ಹಾಗೂ ಉಪ್ಪು ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡರೆ, ಚಾಟ್ ಮಸಾಲಾ ಪುಡಿ ಸಿದ್ಧ.
Advertisement