ಪನೀರ್ ಪಲಾವ್ | Paneer Pulao Recipe in Kannada

ರುಚಿಕರವಾದ ಪನೀರ್ ಪಲಾವ್ ಮಾಡುವ ವಿಧಾನ...
ಪನೀರ್ ಪಲಾವ್ | Paneer Pulao Recipe in Kannada
Updated on

ಬೇಕಾಗುವ ಪದಾರ್ಥಗಳು...

  • ಶುಂಠಿ- ಸ್ವಲ್ಪ

  • ಬೆಳ್ಳುಳ್ಳಿ- ಸ್ವಲ್ಪ

  • ಹಸಿಮೆಣಸಿನ ಕಾಯಿ- 5

  • ಚಕ್ಕೆ-ಸ್ವಲ್ಪ

  • ಲವಂಗ-ಸ್ವಲ್ಪ

  • ಸೋಂಪು- ಸ್ವಲ್ಪ

  • ಹಸಿ ಕಾಯಿತುರಿ-ಸ್ವಲ್ಪ

  • ಪುದೀನಾ-ಸ್ವಲ್ಪ

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಎಣ್ಣೆ-4 ಚಮಚ

  • ತುಪ್ಪ-- 2 ಚಮಚ

  • ಈರುಳ್ಳಿ-1

  • ಪಲಾವ್'ಗೆ ಬೇಕಾಗುವ ಪದಾರ್ಥಗಳು-ಸ್ವಲ್ಪ

  • ಅರಿಶಿಣದ ಪುಡಿ-ಸ್ವಲ್ಪ

  • ಉಪ್ಪು-ರುಚಿಗೆ ತಕ್ಕಷ್ಟು

  • ದನಿಯಾ ಪುಡಿ- 1 ಚಮಚ

  • ಗರಂ ಮಸಾಲಾ- ಅರ್ಧ ಚಮಚ

  • ಕಸೂರಿ ಮೇಥಿ-ಸ್ವಲ್ಪ

  • ಬಟಾಣಿ- 1 ಚಮಚ

  • ಪನ್ನೀರ್- 100 ಗ್ರಾಂ

  • ಅಕ್ಕಿ- 1 ಬಟ್ಟಲು

  • ನಿಂಬೆ ರಸ- 1 ಚಮಚ

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಚಕ್ಕೆ, ಲವಂಗ, ಸೋಂಪು, ಹಸಿ ಕಾಯಿತುರಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

  • ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಎಣ್ಣೆ, ತುಪ್ಪ ಹಾಕ ಕಾಯಲು ಬಿಡಿ. ಬಳಿಕ ಪಲಾವ್ ಪದಾರ್ಥಗಳನ್ನು ಹಾಕಿ. ಕೆಂಪಗಾಗಲು ಬಿಡಿ. ನಂತರ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಕೆಂಪಗಾದ ಬಳಿಕ ರುಬ್ಬಿಕೊಂಡ ಮಿಶ್ರಣ ಹಾಕಿ 5 ನಿಮಿಷ ಬಿಡಿ.

  • ನಂತರ ಅರಿಶಿಣದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಕಸೂರಿ ಮೇಥಿ, ಬಟಾಣಿ, ಉಪ್ಪು, ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ 1 ನಿಮಿಷ ಕೈಯಾಡಿಸಿ. ಇದೀಗ ಅಕ್ಕಿಯನ್ನು ಹಾಕಿ. ನಂತರ ಅಕ್ಕಿ ಹಾಕಿದ ಬಟ್ಟಲಿನಲ್ಲೇ 2 ಬಟ್ಟಲು ನೀರು ಹಾಕಿ. ನಂತರ ನಿಂಬೆ ರಸ ಹಾಕಿ 2 ವಿಷಲ್ ಕೂಗಿಸಿದರೆ ರುಚಿತರವಾದ ಪನೀರ್ ಪಲಾವ್ ಸವಿಯಲು ಸಿದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com