

ಬೇಕಾಗುವ ಪದಾರ್ಥಗಳು...
ಕ್ಯಾರೆಟ್-2
ಹಾಲು- 1 ಬಟ್ಟಲು
ತುಪ್ಪ- ಸ್ವಲ್ಪ
ಸಕ್ಕರೆ- 2 ಚಮಚ
ಸಣ್ಣ ರವೆ- 1/2 ಬಟ್ಟಲು
ಹಾಲಿಗೆ...
ಫುಲ್ ಕ್ರೀಮ್ ಹಾಲು-4 ಬಟ್ಟಲು
ಸಕ್ಕರೆ- 1/2 ಕಪ್
ಬಾದಾಮಿ- 8-10
ಪಿಸ್ತಾ- 8-10
ಏಲಕ್ಕಿ ಪುಡಿ- 1/2 ಚಮಚ
ಕೇಸರಿ ದಳ- 8-10
ಕಸ್ಟರ್ಡ್ ಪೌಡರ್- 2 ಚಮಚ
ಮಾಡುವ ವಿಧಾನ...
ಕ್ಯಾರೆಟ್ ಗಳನ್ನು ಕತ್ತರಿಸಿ, ಮಿಕ್ಸಿ ಜಾರಿ ಹಾಕಿ, ಇದಕ್ಕೆ ಅರ್ಧ ಬಟ್ಟಲು ಹಾಲು, ಸಕ್ಕರೆ ಹಾಗೂ ಏಲಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇದೀಗ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ 2 ಚಮಚ ತುಪ್ಪವನ್ನು ಹಾಕಿ. ಕಾದ ನಂತರ ರವೆಯನ್ನು ಕೆಂಪಗೆ ಹುರಿದುಕೊಳ್ಳಿ. ಬಳಿಕ ರುಬ್ಬಿದ ಕ್ಯಾರೆಟ್, ಅರ್ಧ ಬಟ್ಟಲು ಹಾಲು ಹಾಕಿ 5-10 ನಿಮಿಷ ಕೈಯಾಡಿಸಿ, ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ಗಟ್ಟಿಯಾಗುವವರೆಗೆ ಕೈಯಾಡಿಸಿ. ನಂತರ ಒಲೆಯ ಮೇಲಿಂದ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
ನಂತರ ಮತ್ತೊಂದು ಪಾತ್ರೆಯಲ್ಲಿ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಿ. ಕಸ್ಟರ್ಡ್ ಪೌಡರ್'ನ್ನು ಸ್ವಲ್ಪ ತಣ್ಣಗಿನ ಹಾಲಿನಲ್ಲಿ ಕಲಿಸಿ, ಕಾದ ಹಾಲಿನೊಂದಿಗೆ ಹಾಕಿ ಮಿಶ್ರಣ ಮಾಡಿ. ತಳ ಹತ್ತದಂತೆ ಕೈಯಾಡಿಸುತ್ತಲೇ ಇರಿ. ನಂತರ ಇದಕ್ಕೆ ಸಕ್ಕರೆ, ಕತ್ತರಿಸಿದ ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ, ಕೇಸರಿ ದಳ ಹಾಕಿ ಮಿಶ್ರಣ ಮಾಡಿ.
ಇದೀಗ ಕ್ಯಾರೆಟ್'ನ್ನು ಉಂಡೆಗಳನ್ನಾಗಿ ಮಾಡಿ, ಹಾಲು ಬಿಸಿ ಇರುವಾಗಲೇ ಇದಕ್ಕೆ ಉಂಡೆಗಳನ್ನು ಹಾಕಿ. ಉಂಡೆಗಳು ಹಾಲಿನಲ್ಲಿ 1 ಗಂಟೆ ನೆನೆಯಲು ಬಿಟ್ಟರೆ, ರುಚಿಕರವಾದ ಕ್ಯಾರೆಟ್ ರಸ್ಮಲಾಯಿ ಸವಿಯಲು ಸಿದ್ಧ.
Advertisement