ಸಂಜೆ ಸ್ನಾಕ್ಸ್‌ಗೆ 10 ನಿಮಿಷದಲ್ಲೇ ಮಾಡಿ ಸೇವ್ ಪುರಿ; ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಫೇವರೇಟ್!

ಸಂಜೆ ಸ್ನಾಕ್ಸ್‌ಗೆ ಮನೆಯಲ್ಲೇ ಮಾಡಿ ಅಂಗಡಿ ಸ್ಟೈಲ್ ಸೇವ್ ಪುರಿ;ಕೇವಲ 10 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಸೇವ್ ಪುರಿ ರೆಸಿಪಿ ಇಲ್ಲಿದೆ
Sev Puri Recipe
ಸೇವ್ ಪುರಿ ಪಾಕವಿಧಾನOnline Desk
Updated on

Sev Puri Recipe: ಸಂಜೆ ಆಗುತ್ತಿದ್ದಂತೆ ಏನಾದರೂ ಚಾಟ್ಸ್ ತಿನ್ನಬೇಕು ಅನಿಸೋದು ಸಹಜ. ಅದ್ರಲ್ಲೂ, ಚಾಟ್ಸ್ ಎಂದ ತಕ್ಷಣ ನೆನಪಾಗುವುದೇ ರೋಡ್ ಸೈಡ್ ತಿಂಡಿಗಳು. ಅದರಲ್ಲಿಯೂ ಗರಿಗರಿಯಾದ ಪುರಿ, ಮಸಾಲೆ ಆಲೂಗಡ್ಡೆ, ಖಾರ-ಸಿಹಿ ಚಟ್ನಿಗಳು ಹಾಗೂ ಉದಾರವಾಗಿ ಹಾಕಿದ ಸೇವ್‌ನಿಂದ ಕೂಡಿದ 'ಸೇವ್ ಪುರಿ' ಎಲ್ಲರ ಅಚ್ಚುಮೆಚ್ಚು. ಹಾಗಾಗಿ, ಅದರ ಸಿಂಪಲ್ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಪುರಿಗಾಗಿ:

  • ಪುರಿ - 6 ರಿಂದ 8

  • ಬೇಯಿಸಿದ ಆಲೂಗಡ್ಡೆ - 1

  • ಈರುಳ್ಳಿ - 1 ಸಣ್ಣದಾಗಿ ಹೆಚ್ಚಿದ್ದು

  • ಟೊಮ್ಯಾಟೊ - 1 ಸಣ್ಣದಾಗಿ ಹೆಚ್ಚಿದ್ದು

  • ಕೊತ್ತಂಬರಿ ಸೊಪ್ಪು - 2 ಚಮಚ

  • ಸೇವ್ - 1 ಕಪ್, ಕುರುಕುರು

  • ಜೀರಿಗೆ ಪುಡಿ, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ

  • ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ, ದಾಳಿಂಬೆ (ಬೇಕಾದ್ರೆ)

ಚಟ್ನಿಗಳಿಗೆ:

  • ಹಸಿ ಚಟ್ನಿ: ಪುದೀನಾ ಸೊಪ್ಪು + ಕೊತ್ತಂಬರಿ ಸೊಪ್ಪು + ಹಸಿ ಮೆಣಸಿನಕಾಯಿ + ಉಪ್ಪು + ನಿಂಬೆಹಣ್ಣು

  • ಹುಣಸೆ ಚಟ್ನಿ: ಹುಣಸೆಹಣ್ಣು + ಬೆಲ್ಲ + ಜೀರಿಗೆ ಪುಡಿ + ಕಾಳು ಮೆಣಸು ಪುಡಿ + ಉಪ್ಪು

Sev Puri Recipe
ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ

ಮಾಡುವ ವಿಧಾನ:

ಹಂತ 1: ಚಟ್ನಿ ರೆಡಿ ಮಾಡಿ

ಹಸಿ ಚಟ್ನಿ ಎಲ್ಲಾ ಪದಾರ್ಥ ಹಾಕಿ ರುಬ್ಬಿ. ಹುಣಸೆ ಚಟ್ನಿಗೆ ಹುಣಸೆ ನೀರಿಗೆ ಬೆಲ್ಲ ಕರಗಿಸಿ, ಮಸಾಲೆ ಹಾಕಿ ಕುದಿಸಿ.

ಹಂತ 2: ಆಲೂಗೆಡ್ಡೆ ಮಿಕ್ಸ್

ಬೇಯಿಸಿದ ಆಲೂಗಡ್ಡೆಗೆ ಸ್ವಲ್ಪ ಉಪ್ಪು, ಜೀರಿಗೆ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.

Sev Puri Recipe
ಮಸಾಲಾ ಪುರಿ | Masala Puri recipe in Kannada

ಹಂತ 3:

  • ಪುರಿಗಳನ್ನು ಜೋಡಿಸಿ: ಒಂದು ಅಗಲವಾದ ಪ್ಲೇಟ್‌ನಲ್ಲಿ 7-8 ಫ್ಲಾಟ್ ಪುರಿಗಳನ್ನು ಸಾಲಾಗಿ ಜೋಡಿಸಿ.

  • ಟಾಪಿಂಗ್ಸ್ ಹಾಕಿ: ಪ್ರತಿಯೊಂದು ಪುರಿಯ ಮೇಲೆಯೂ ಸ್ವಲ್ಪ ಹಿಸುಕಿದ ಆಲೂಗಡ್ಡೆ ಮಿಶ್ರಣವನ್ನು ಇಡಿ. ನಂತರ ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೊ ಚೂರುಗಳನ್ನು ಹಾಕಿ.

  • ಮಸಾಲೆ ಹಾಕಿ: ಈಗ ಇದರ ಮೇಲೆ ಸ್ವಲ್ಪ ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ.

  • ಚಟ್ನಿಗಳನ್ನು ಸೇರಿಸಿ: ಪ್ರತಿ ಪುರಿಯ ಮೇಲೆ ಚಟ್ನಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ.

  • ಸೇವ್‌ನಿಂದ ಹಾಕಿ: ಚಾಟ್ ಅಂಗಡಿಯ ಲುಕ್ ಮತ್ತು ಗರಿಗರಿ ರುಚಿಗಾಗಿ ಪುರಿಗಳ ಮೇಲೆ ಉದುರು ಉದಾರವಾಗಿ ಸಣ್ಣ ನೈಲಾನ್ ಸೇವ್ ಅನ್ನು ಹಾಕಿ.

  • ಕೊನೆಯದಾಗಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕೆಲವು ಹನಿ ನಿಂಬೆ ರಸವನ್ನು ಹಿಂಡಿದರೆ, ಬಾಯಲ್ಲಿ ನೀರೂರಿಸುವ ಸೇವ್ ಪುರಿ ಸವಿಯಲು ಸಿದ್ಧ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com