ಚಿಕನ್ ವೈಟ್ ಪಲಾವ್ | Chicken white pulao recipe in Kannada

ಚಿಕನ್ ವೈಟ್ ಪಲಾವ್ ಸಾಮಾನ್ಯ ಪಲಾವ್‌ಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುವ ಡಿಶ್ ಆಗಿದೆ. ಹೆಚ್ಚು ಖಾರವಿಲ್ಲದೇ, ಮಸಾಲೆಗಳ ಜೊತೆಗೆ ತಯಾರಾಗುವ ಈ ಪಲಾವ್‌ನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.
ಚಿಕನ್ ವೈಟ್ ಪಲಾವ್ | Chicken white pulao recipe in Kannada
Updated on

ಚಿಕನ್ ವೈಟ್ ಪಲಾವ್ ಸಾಮಾನ್ಯ ಪಲಾವ್‌ಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುವ ಡಿಶ್ ಆಗಿದೆ. ಹೆಚ್ಚು ಖಾರವಿಲ್ಲದೇ, ಮಸಾಲೆಗಳ ಜೊತೆಗೆ ತಯಾರಾಗುವ ಈ ಪಲಾವ್‌ನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಮಧ್ಯಾಹ್ನದ ಊಟಕ್ಕಾಗಲಿ, ವೀಕೆಂಡ್ ಸ್ಪೆಷಲ್ ಮೆನುಗಾಗಲಿ ಇದು ಸೂಪರ್ ಆಯ್ಕೆ.

ಬೇಕಾಗುವ ಪದಾರ್ಥಗಳು...

  • ಬಾಸ್ಮತಿ ಅಕ್ಕಿ – 2 ಬಟ್ಟಲು

  • ಚಿಕನ್ – 500 ಗ್ರಾಂ

  • ಈರುಳ್ಳಿ – 2 (ಉದ್ದವಾಗಿ ಸ್ಲೈಸ್ ಮಾಡಿದದ್ದು)

  • ಹಸಿಮೆಣಸಿನಕಾಯಿ – 4 ರಿಂದ 5

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1½ ಚಮಚ

  • ಮೊಸರು – ½ ಬಟ್ಟಲು

  • ಹಾಲು – 1 ಬಟ್ಟಲು

  • ತುಪ್ಪ – 2 ಚಮಚ

  • ಎಣ್ಣೆ – 2 ಚಮಚ

  • ಪುದೀನಾ ಸೊಪ್ಪು – ½ ಬಟ್ಟಲು

  • ಕೊತ್ತಂಬರಿ ಸೊಪ್ಪು – ½ ಬಟ್ಟಲು

  • ಗೋಡಂಬಿ – 10 ರಿಂದ 12

  • ದಾಲ್ಚಿನ್ನಿ – 2 ತುಂಡು

  • ಲವಂಗ – 4 ರಿಂದ 5

  • ಏಲಕ್ಕಿ – 3

  • ಬಿರಿಯಾನಿ ಎಲೆ – 1

  • ಮೆಣಸು – 1 ಚಮಚ

  • ಜೀರಿಗೆ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ನಿಂಬೆ ರಸ – 1 ಚಮಚ

ಚಿಕನ್ ವೈಟ್ ಪಲಾವ್ | Chicken white pulao recipe in Kannada
ಎಗ್ ಕೈಮಾ ಉಂಡೆ ಸಾರು | Egg Keema Ball Curry recipe in Kannada

ಮಾಡುವ ವಿಧಾನ...

  • ಚಿಕನ್, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಪುಡಿ, ನಿಂಬೆ ರಸ ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ಕನಿಷ್ಠ 30 ನಿಮಿಷ ನೆನೆಯಲು ಬಿಡಿ.

  • ಅಕ್ಕಿಯನ್ನು ಚೆನ್ನಾಗಿ ತೊಳೆದು 20 ರಿಂದ 30 ನಿಮಿಷ ನೆನೆಸಿಡಿ.

  • ಒಂದು ದೊಡ್ಡ ಪಾತ್ರೆ ಅಥವಾ ಕುಕ್ಕರ್‌ನಲ್ಲಿ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಜೀರಿಗೆ, ಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಉದ್ದವಾಗಿ ಕತ್ತರಿಸಿದ ಈರುಳ್ಳಿ ಹಾಕಿ ಲೈಟ್ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

  • ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಬಳಿಕ ಮೆರಿನೇಟ್ ಮಾಡಿದ ಚಿಕನ್ ಸೇರಿಸಿ 5–7 ನಿಮಿಷ ಚೆನ್ನಾಗಿ ಕಲಸಿ ಬೇಯಿಸಿ.

  • ನಂತರ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಈಗ ನೆನೆಸಿದ ಅಕ್ಕಿಯನ್ನು ಬಾಕಿ ಹಾಕಿ ನಿಧಾನವಾಗಿ ಕಲಸಿ. ಅದಕ್ಕೆ ಹಾಲು, ಅಳತೆ ನೀರು, ಉಪ್ಪು ಮತ್ತು ನಿಂಬೆ ರಸ ಸೇರಿಸಿ. ಎಲ್ಲವನ್ನೂ ನಿಧಾನವಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ.

  • ಕುಕ್ಕರ್‌ನಲ್ಲಿ ಮಾಡುತ್ತಿದ್ದರೆ – 1 ವಿಸಿಲ್ ಸಾಕು, ನಂತರ ಸಿಮ್‌ನಲ್ಲಿ 5 ನಿಮಿಷ ಇಡಿ. ಪಾತ್ರೆಯಲ್ಲಿ ಮಾಡುತ್ತಿದ್ದರೆ – ಕಡಿಮೆ ಉರಿಯಲ್ಲಿ ಅಕ್ಕಿ ಚೆನ್ನಾಗಿ ಉದುರು-ಉದುರಾಗುವವರಗೆ ಬೇಯಿಸಿ.

  • ಕೊನೆಯಲ್ಲಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಮೇಲಿಂದ ಹಾಕಿ. 5 ನಿಮಿಷ ದಮ್‌ನಲ್ಲಿ ಇಟ್ಟರೆ ರುಚಿ ಇನ್ನಷ್ಟು ಚೆನ್ನಾಗಿರುತ್ತದೆ.

ಟಿಪ್ಸ್

  • ವೈಟ್ ಪಲಾವ್‌ಗೆ ಕೆಂಪು ಖಾರದ ಪುಡಿ ಬಳಸಬೇಡಿ; ಮೆಣಸು ಮತ್ತು ಹಸಿಮೆಣಸಿನಕಾಯಿ ಸಾಕು.

  • ಇನ್ನಷ್ಟು ರಿಚ್ ಟೇಸ್ಟ್ ಬೇಕಿದ್ದರೆ ಸ್ವಲ್ಪ ಫ್ರೆಶ್ ಕ್ರೀಮ್ ಸೇರಿಸಬಹುದು.

  • ಚಿಕನ್ ಮೃದುವಾಗಿರಲು ಕನಿಷ್ಠ 30 ನಿಮಿಷ ಮೆರಿನೇಟ್ ಮಾಡುವುದು ಉತ್ತಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com