ಕಬಾಬ್ ಪುಡಿ ಇಲ್ಲವೇ? ಚಿಂತೆ ಬೇಡ, ಅಡುಗೆಮನೆಯ ಮಸಾಲೆಯಿಂದಲೇ ಮಾಡಿ ಗರಿಗರಿಯಾದ ಚಿಕನ್ ಕಬಾಬ್..!

ಮನೆಯಲ್ಲಿ ಕಬಾಬ್ ಮಾಡಲು ವಿಶೇಷ ಕಬಾಬ್ ಪುಡಿ ಬೇಕೇಬೇಕು ಎಂದೇನಿಲ್ಲ. ಅಡುಗೆಮನೆಯಲ್ಲೇ ಸಿಗುವ ಸಾಮಾನ್ಯ ಮಸಾಲೆ ಪದಾರ್ಥಗಳನ್ನು ಬಳಸಿ ಗರಿಗರಿಯಾದ, ರುಚಿಕರವಾದ ಕಬಾಬ್ ತಯಾರಿಸಬಹುದು.
Kebab
ಕಬಾಬ್
Updated on: 

ಮನೆಯಲ್ಲಿ ಕಬಾಬ್ ಮಾಡಲು ವಿಶೇಷ ಕಬಾಬ್ ಪುಡಿ ಬೇಕೇಬೇಕು ಎಂದೇನಿಲ್ಲ. ಅಡುಗೆಮನೆಯಲ್ಲೇ ಸಿಗುವ ಸಾಮಾನ್ಯ ಮಸಾಲೆ ಪದಾರ್ಥಗಳನ್ನು ಬಳಸಿ ಗರಿಗರಿಯಾದ, ರುಚಿಕರವಾದ ಕಬಾಬ್ ತಯಾರಿಸಬಹುದು. ಹೊರಗಡೆ ಸಿಗುವ ಕಬಾಬ್‌ನಂತೆಯೇ ರುಚಿ ಬರಲು ಮಸಾಲೆಗಳ ಪ್ರಮಾಣ ಹಾಗೂ ಮಿಶ್ರಣವನ್ನು ಸರಿಯಾಗಿ ಹದಗೊಳಿಸುವುದು ಮುಖ್ಯ.

ಬೇಕಾಗುವ ಪದಾರ್ಥಗಳು...

  • ಚಿಕನ್ – 500 ಗ್ರಾಂ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಖಾರದ ಪುಡಿ – 1½ ಚಮಚ

  • ದನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲೆ – ½ ಚಮಚ

  • ಅರಿಶಿನ – ¼ ಚಮಚ

  • ಕಾಳುಮೆಣಸಿನ ಪುಡಿ – ½ ಚಮಚ

  • ಮೊಸರು – 2 ಚಮಚ

  • ನಿಂಬೆಹಣ್ಣಿನ ರಸ – 1 ಚಮಚ

  • ಕಾರ್ನ್ ಫ್ಲೋರ್ – 2 ಚಮಚ

  • ಅಕ್ಕಿ ಹಿಟ್ಟು – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಮೊಟ್ಟೆ – 1

  • ಕರಿಬೇವು – ಸ್ವಲ್ಪ

  • ಎಣ್ಣೆ – ಕರಿಯಲು

Kebab
ಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...

ಮಾಡುವ ವಿಧಾನ...

  • ಮೊದಲು ಚಿಕನ್‌ನ್ನು ಸ್ವಚ್ಛವಾಗಿ ತೊಳೆದು ನೀರು ಸಂಪೂರ್ಣವಾಗಿ ಬಸಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಚಿಕನ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಅರಿಶಿನ, ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ.

  • ನಂತರ ಮೊಸರು, ನಿಂಬೆಹಣ್ಣಿನ ರಸ ಮತ್ತು ಮೊಟ್ಟೆ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಕಾರ್ನ್ ಫ್ಲೋರ್ ಹಾಗೂ ಅಕ್ಕಿ ಹಿಟ್ಟು ಸೇರಿಸಿ ಚಿಕನ್‌ಗೆ ಮಸಾಲೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಿಶ್ರಣ ಮಾಡಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕರಿಬೇವು ಸೇರಿಸಿ.

  • ಈ ಮಿಶ್ರಣವನ್ನು ಕನಿಷ್ಠ 30 ನಿಮಿಷಗಳ ಕಾಲ ಮುಚ್ಚಿಟ್ಟು ನೆನೆಯಲು ಬಿಡಿ. ಸಮಯವಿದ್ದರೆ 1–2 ಗಂಟೆ ಇಟ್ಟರೆ ಮಸಾಲೆ ಚಿಕನ್‌ನೊಳಗೆ ಚೆನ್ನಾಗಿ ಸೇರಿ ರುಚಿ ಹೆಚ್ಚುತ್ತದೆ.

  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಸಾಲೆ ಹಚ್ಚಿದ ಚಿಕನ್ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಹಾಕಿ ನಿಧಾನವಾಗಿ ಕರಿಯಿರಿ. ಹೊರಭಾಗ ಗರಿಗರಿಯಾಗಿ ಹಾಗೂ ಚಿಕನ್ ಸಂಪೂರ್ಣವಾಗಿ ಬೆಂದ ನಂತರ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಇದೀಗ ಗರಿಗರಿಯಾದ ಹಾಗೂ ರುಚಿಕರವಾದ ಚಿಕನ್ ಕಬಾಬ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com