ಕರ್ನಾಟಕ ಸೇರಿದಂತೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಏರ್ಟೆಲ್ ವೈಫೈ ಕಾಲಿಂಗ್!

ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆ ಗ್ರಾಹಕ ಸೆಳೆಯಲು ವೈಪೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದ್ದು, ಈ ವೈಫೈ ಕಾಲಿಂಗ್ ಸೇವೆ ಮುಂಬೈ, ಕೋಲ್ಕತಾ ಸೇರಿದಂತೆ ದಕ್ಷಿಣದ ಮೂರು ನಗರಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆ ಗ್ರಾಹಕ ಸೆಳೆಯಲು ವೈಪೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದ್ದು, ಈ ವೈಫೈ ಕಾಲಿಂಗ್ ಸೇವೆ ಮುಂಬೈ, ಕೋಲ್ಕತಾ ಸೇರಿದಂತೆ ದಕ್ಷಿಣದ ಮೂರು ನಗರಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಈ ಸೇವೆಯನ್ನು ಮುಂಬೈ, ಕೋಲ್ಕತಾ ಮಾತ್ರವಲ್ಲದೇ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕೆಲ ನಗರಗಳಿಗೆ ವಿಸ್ತರಿಸಲು ಏರ್ಟೆಲ್ ಸಂಸ್ಥೆ ನಿರ್ಧರಿಸಿದೆ.

ಏನಿದು ವೈಫೈ ಕಾಲಿಂಗ್?
ಇದು ವೈರ್ಲೆಸ್ ಇಂಟರ್ ನೆಟ್ ಮತ್ತು ಕಾಲಿಂಗ್ ಸೇವೆಯಾಗಿದ್ದು, ಇದಕ್ಕೆ ಯಾವುದೇ ರೀತಿಯ ಸೆಲ್ಯುಲಾರ್ ಸಂಸ್ಥೆ ಅಥವಾ ಸಿಮ್ ಕಾರ್ಡ್ ಸೇವೆಯ ಅಗತ್ಯವಿರುವುದಿಲ್ಲ. ಈ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ವೈಫೈ ಸಂಪರ್ಕದ ಮೂಲಕ ವಾಯ್ಸ್ ಕರೆಗಳನ್ನು ಮಾಡಬಹುದಾಗಿದ್ದು, ವೈಫೈ ಕಾಲಿಂಗ್ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಕೇವಲ ವೈಫೈ ನೆಟವರ್ಕ್ ಇದ್ದರೇ ಸಾಕು ಗ್ರಾಹಕರು ವಾಯ್ಸ್‌ ಕಾಲ್ ಮಾಡಬಹುದಾಗಿದೆ.

ಯಾವ ಯಾವ ಫೋನ್ ಗಳಲ್ಲಿ ಈ ಸೇವೆ ಲಭ್ಯ?
ಐಫೋನ್‌ ಸರಣಿ:
ಐಫೋನ್ ಎಕ್ಸ್‌ಆರ್, ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ ಎಸ್ಇ, ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್, ಐಫೋನ್ ಎಕ್ಸ್, ಐಫೋನ್ ಎಕ್ಸ್ ಮ್ಯಾಕ್ಸ್, ಐಫೋನ್ 11, ಐಫೋನ್ 11 ಪ್ರೊ,
ಒನ್‌ಪ್ಲಸ್ ಸರಣಿ: ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7 ಟಿ, ಒನ್‌ಪ್ಲಸ್ 7 ಟಿ ಪ್ರೊ
ಶಿಯೋಮಿ ಸರಣಿ: ಶಿಯೋಮಿ ಪೊಕೊ ಎಫ್ 1, ರೆಡ್‌ಮಿ 5, ರೆಡ್‌ಮಿ ಕೆ 20, ರೆಡ್‌ಮಿ 5, ರೆಡ್‌ಮಿ ಕೆ 20 ಪ್ರೊ
ಸ್ಯಾಮ್‌ಸಂಗ್ ಸರಣಿ: ಸ್ಯಾಮ್‌ಸಂಗ್ ಜೆ 6, ಸ್ಯಾಮ್‌ಸಂಗ್ 6 ರಂದು, ಸ್ಯಾಮ್‌ಸಂಗ್ ಎಂ 30 ಎಸ್, ಸ್ಯಾಮ್‌ಸಂಗ್ ಎ 10 ಎಸ್, ಸ್ಯಾಮ್‌ಸಂಗ್ ಎಂ 20, ಸ್ಯಾಮ್‌ಸಂಗ್ ಎಸ್ 10 ಇ, ಸ್ಯಾಮ್‌ಸಂಗ್ ಎಸ್ 10, ಸ್ಯಾಮ್‌ಸಂಗ್ ಎಸ್ 10 ಪ್ಲಸ್.

ಬಳಕೆ ಹೇಗೆ?
ವೈಫೈ ಕಾಲಿಂಗ್ ಸೇವೆಗೆ ಗ್ರಾಹಕರು ಯಾವುದೇ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು ಯಾವುದೇ ಸಿಮ್ ಸೇರಿಸುವ ಅಗತ್ಯವು ಇಲ್ಲ. ಕೇವಲವ ಮೊಬೈಲ್ ನಲ್ಲಿ ಕೆಲ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. 

ಏರ್ಟೆಲ್ ವೈ-ಫೈ ಕಾಲಿಂಗ್ ಅನ್ನು ಪ್ರಾರಂಭಿಸಲು ಬಳಕೆದಾರರು ತಮ್ಮ ಫೋನ್‌ನಲ್ಲಿ ವೈ-ಫೈ ಕರೆ ಸೇವೆಯನ್ನು ಸಕ್ರಿಯಗೊಳಿಸಬೇಕು. ಅಲ್ಲದೆ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಬಳಿಕ ಏರ್ಟೆಲ್ ಬ್ರಾಡ್ ಬ್ಯಾಂಡ್ ಗೆ ಮೊಬೈಲ್ ವೈಫೈ ಮೂಲಕ ಕನೆಕ್ಟ್ ಮಾಡಬೇಕು. ಬಳಿಕ ಬಳಕೆದಾರರು ಮೊಬೈಲ್ ನಲ್ಲಿನ VoLTE ಸೆಟ್ಟಿಂಗ್ ಅನ್ನು ಆನ್ ಮಾಡಬೇಕು. ಇದಕ್ಕಾಗಿ ಮೊಬೈಲ್ ನಲ್ಲಿ ಸೆಟ್ಟಿಂಗ್ಸ್ ಗೆ ತೆರಳಿ, SIM & Network Settings ನಲ್ಲಿ ಏರ್ಟೆಲ್ ಸಿಮ್ ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ Activate Make Calls using WiFi ಆಯ್ಕೆ ಕಾಣುತ್ತದೆ. ಆಗ ನೀವು ವೈಫೈ ಕಾಲಿಂಗ್ ಆಯ್ಕೆಯನ್ನು ಆಕ್ಟಿವೇಟ್ ಮಾಡಬೇಕು. 

ಡೇಟಾ ಬಳಕೆಗೆ ಸಂಬಂಧಿಸಿದಂತೆ, 5 ನಿಮಿಷಗಳ ವೈ-ಫೈ ಕರೆ 5MB ಗಿಂತ ಕಡಿಮೆ ಡೇಟಾವನ್ನು ಬಳಸುತ್ತದೆ. ಒಂದು ವೇಳೆ ವೈ-ಫೈ ನೆಟ್‌ವರ್ಕ್ ಆಫ್ ಆಗಿದ್ದರೆ, ನಡೆಯುತ್ತಿರುವ ವೈ-ಫೈ ಕರೆಯನ್ನು VoLTE ಗೆ ಬದಲಾಯಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com