ಭಾರತದ ಮೊದಲ 5 ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿದ್ದು ಇವರೇ....
ಗ್ಯಾಡ್ಜೆಟ್ಸ್
ಭಾರತದ ಮೊದಲ 5 ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿದ್ದು ಇವರೇ....
4 ಜಿ ಯುಗ ಹಳೆಯದಾಗಿ 5 ಜಿ ಯುಗಾರಂಭದ ಸನಿಹದಲ್ಲಿ ನಾವಿದ್ದೇವೆ. ಈ ನಡುವೆ ಭಾರತದಲ್ಲಿ ಮೊದಲ 5ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ನ್ನು ಮಾ.04 ರಂದು ಮಾಡಲಾಗಿದೆ.
ಹೈದರಾಬಾದ್: 4 ಜಿ ಯುಗ ಹಳೆಯದಾಗಿ 5 ಜಿ ಯುಗಾರಂಭದ ಸನಿಹದಲ್ಲಿ ನಾವಿದ್ದೇವೆ. ಈ ನಡುವೆ ಭಾರತದಲ್ಲಿ ಮೊದಲ 5ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ನ್ನು ಮಾ.04 ರಂದು ಮಾಡಲಾಗಿದೆ.
ಓಪ್ಪೊ ಸಂಸ್ಥೆ ಹೈದರಾಬಾದ್ ನಲ್ಲಿರುವ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಭಾರತದ ಮೊದಲ 5 ಜಿ ವಿಡಿಯೋ ಕರೆ ಮಾಡಿದೆ. ಹೈದರಾಬಾದ್ ನ ನಮ್ಮ ಕೇಂದ್ರದಲ್ಲಿ ಮಾಡಲಾಗಿರುವ ಪ್ರಯೋಗ 5 ಜಿ ಸೇವೆಗಳನ್ನು ಒದಗಿಸುವ ಭವಿಷ್ಯದ ದೃಷ್ಟಿಕೋನವನ್ನು ಬಲಪಡಿಸಿದೆ ಎಂದು ಓಪ್ಪೋ ಇಂಡಿಯಾದ ಆರ್ & ಡಿ ವಿಭಾಗದ ಉಪಾಧ್ಯಕ್ಷ ತಸ್ಲೀಂ ಅರೀಫ್ ಹೇಳಿದ್ದಾರೆ.
5 ಜಿ ಗೆ ತಂತ್ರಜ್ಞಾನವನ್ನು ಹೊಂದಿರುವ ಓಪ್ಪೋ FindX2 ಮೊಬೈಲ್ ಜಾಗತಿಕ ಮಟ್ಟದಲ್ಲಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ