ಆ ದಿನ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ, ಹೊಸ ದಾಖಲೆ!

ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

Published: 03rd January 2020 05:51 PM  |   Last Updated: 03rd January 2020 05:51 PM   |  A+A-


WhatsApp snooping case

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ನ್ಯೂಯಾರ್ಕ್: ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಹೊಸ ವರ್ಷದ ಶುಭಾಶಯ, ಹಾರೈಕೆಗಳನ್ನು ತಿಳಿಸಲು ವಿಶ್ವದಾದ್ಯಂತ ಜನರು ವಾಟ್ಸಾಪ್ ಬಳಸಿಕೊಂಡಿದ್ದರು. ಹೊಸವರ್ಷದ ಮೊದಲ ದಿನ ಒಟ್ಟು ೧೦,೦೦೦ ಕೋಟಿ ಸಂದೇಶಗಳನ್ನು ರವಾನಿಸಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಂದೇಶಗಳ ವಿನಿಮಯ  ಒಂದು ದಾಖಲೆಯಾಗಿದೆ.

ಈ ಪೈಕಿ 2,000 ಕೋಟಿಗೂ ಹೆಚ್ಚು ಸಂದೇಶಗಳನ್ನು ಭಾರತೀಯರರು ರವಾನಿಸಿರುವುದು ವಿಶೇಷ...!

ಹತ್ತು ಸಾವಿರ ಕೋಟಿಗೂ ಹೆಚ್ಚು ವಿನಿಮಯಮಾಡಿಕೊಂಡಿರುವ ಸಂದೇಶಗಳಲ್ಲಿ ೧,೨೦೦ ಕೋಟಿಗೂ ಹೆಚ್ಚು ಚಿತ್ರಗಳಿವೆ.  ಹೊಸ ವರ್ಷ ಆರಂಭಗೊಂಡ ಡಿಸೆಂಬರ್ 31ರ ಮಧ್ಯರಾತ್ರಿಯವರೆಗಿನ 24ಗಂಟೆಗಳಲ್ಲಿ 10,000 ಕೋಟಿ  (100 ಬಿಲಿಯನ್) ಸಂದೇಶಗಳು ವಿನಿಮಯವಾಗಿವೆ ಎಂದು ವಾಟ್ಸಾಪ್ ಪ್ರಕಟಣೆಯಲ್ಲಿ ತಿಳಿಸಿದೆ.

ಹತ್ತು ವರ್ಷಗಳ ಹಿಂದೆ ಆರಂಭವಾದ ವಾಟ್ಸಾಪ್ ಸೇವೆ ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಸಂದೇಶಗಳನ್ನು ಹಂಚಿಕೊಂಡಿರುವುದು ಇದೇ ಮೊದಲು.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp