ಭಾರತದ ಮೊದಲ 5 ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿದ್ದು ಇವರೇ.... 

4 ಜಿ ಯುಗ ಹಳೆಯದಾಗಿ 5 ಜಿ ಯುಗಾರಂಭದ ಸನಿಹದಲ್ಲಿ ನಾವಿದ್ದೇವೆ. ಈ ನಡುವೆ ಭಾರತದಲ್ಲಿ ಮೊದಲ 5ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ನ್ನು ಮಾ.04 ರಂದು ಮಾಡಲಾಗಿದೆ. 

Published: 04th March 2020 06:21 PM  |   Last Updated: 04th March 2020 06:21 PM   |  A+A-


OPPO makes India's first 5G WhatsApp call

ಭಾರತದ ಮೊದಲ 5 ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿದ್ದು ಇವರೇ....

Posted By : Srinivas Rao BV
Source : IANS

ಹೈದರಾಬಾದ್: 4 ಜಿ ಯುಗ ಹಳೆಯದಾಗಿ 5 ಜಿ ಯುಗಾರಂಭದ ಸನಿಹದಲ್ಲಿ ನಾವಿದ್ದೇವೆ. ಈ ನಡುವೆ ಭಾರತದಲ್ಲಿ ಮೊದಲ 5ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ನ್ನು ಮಾ.04 ರಂದು ಮಾಡಲಾಗಿದೆ. 

ಓಪ್ಪೊ ಸಂಸ್ಥೆ ಹೈದರಾಬಾದ್ ನಲ್ಲಿರುವ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಭಾರತದ ಮೊದಲ 5 ಜಿ ವಿಡಿಯೋ ಕರೆ ಮಾಡಿದೆ. ಹೈದರಾಬಾದ್ ನ ನಮ್ಮ ಕೇಂದ್ರದಲ್ಲಿ ಮಾಡಲಾಗಿರುವ ಪ್ರಯೋಗ 5 ಜಿ ಸೇವೆಗಳನ್ನು ಒದಗಿಸುವ ಭವಿಷ್ಯದ ದೃಷ್ಟಿಕೋನವನ್ನು ಬಲಪಡಿಸಿದೆ ಎಂದು ಓಪ್ಪೋ ಇಂಡಿಯಾದ ಆರ್ & ಡಿ ವಿಭಾಗದ ಉಪಾಧ್ಯಕ್ಷ ತಸ್ಲೀಂ ಅರೀಫ್ ಹೇಳಿದ್ದಾರೆ. 

5 ಜಿ ಗೆ ತಂತ್ರಜ್ಞಾನವನ್ನು ಹೊಂದಿರುವ ಓಪ್ಪೋ FindX2 ಮೊಬೈಲ್ ಜಾಗತಿಕ ಮಟ್ಟದಲ್ಲಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. 

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp