ಕೊನೆಗೂ ಬಂತು ವಾಟ್ಸಪ್ ಡಾರ್ಕ್ ಮೋಡ್: ಐಫೋನ್, ಆ್ಯಂಡ್ರಾಯ್ಡ್ ನಲ್ಲಿ ಲಭ್ಯ!

ಖ್ಯಾತ ಸಾಮಾಜಿಕ ಮೆಸೆಜಿಂಗ್ ತಾಣ ವಾಟ್ಸಪ್ ಗ್ರಾಹಕರ ಬಹು ನಿರೀಕ್ಷಿತ ಸೆಟ್ಟಿಂಗ್ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಿದೆ.
ವಾಟ್ಸಪ್ ಡಾರ್ಕ್ ಮೋಡ್ ಥೀಮ್
ವಾಟ್ಸಪ್ ಡಾರ್ಕ್ ಮೋಡ್ ಥೀಮ್

ನವದೆಹಲಿ: ಖ್ಯಾತ ಸಾಮಾಜಿಕ ಮೆಸೆಜಿಂಗ್ ತಾಣ ವಾಟ್ಸಪ್ ಗ್ರಾಹಕರ ಬಹು ನಿರೀಕ್ಷಿತ ಸೆಟ್ಟಿಂಗ್ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಿದೆ.

ವಾಟ್ಸಪ್ ಬಳಕೆದಾರರು ಅತ್ಯಂತ ಕಾತರದಿಂದ ಕಾಯುತ್ತಿದ್ದ ಡಾರ್ಕ್ ಮೋಡ್ ಥೀಮ್ ಕೊನೆಗೂ ಲಭ್ಯವಾಗುತ್ತಿದ್ದು, ಜಾಗತಿಕವಾಗಿ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ನೂತನ ಡಾರ್ಕ್ ಮೋಡಿ ಸೆಟ್ಟಿಂಗ್ ಲಭ್ಯವಿದೆ. ಮೊಬೈಲ್ ನಲ್ಲಿರುವ ವಾಟ್ಸಪ್ ಆ್ಯಪ್ ಅನ್ನು ಅಪ್ ಡೇಟ್ ಮಾಡಿಕೊಂಡರೆ ಈ ನೂತನ ಸೆಟ್ಟಿಂಗ್ ಲಭ್ಯವಿದೆ.

ಅಲ್ಲದೆ ಫೋನ್ ಡಾರ್ಕ್ ಥೀಮ್ ಹೊಂದಿರುವುದು ಕೂಡ ಈ ಸೆಟ್ಟಿಂಗ್ ಗೆ ಅಗತ್ಯ. ನಿಮ್ಮ ಫೋನ್ ಥೀಮ್ ಡಾರ್ಕ್ ಮೋಡ್ ಹೊಂದಿದ್ದರೆ, ವಾಟ್ಸಪ್ ಕೂಡ ಸ್ವಯಂಚಾಲಿತವಾಗಿ ಡಾರ್ಕ್ ಮೋಡ್‌ಗೆ ಬದಲಾಗಲಿದೆ. ವಾಟ್ಸಪ್ ಡಾರ್ಕ್ ಮೋಡ್‌ ನಿಂದಾಗಿ ಬಳಕೆದಾರರ ಕಣ್ಣಿನ ಮೇಲೆ ಬೀಳುವ ಹೆಚ್ಚಿನ ಒತ್ತಡ ಶಮನವಾಗುತ್ತದೆ. ಅಲ್ಲದೆ ಕಡಿಮೆ ಬೆಳಕಿನಲ್ಲಿ ವಾಟ್ಸಪ್ ಕಾರ್ಯ ನಿರ್ವಹಿಸುವುದರಿಂದ ಫೋನ್ ಬ್ಯಾಟರಿ ಉಳಿತಾಯಕ್ಕೂ ಇದು ಸಹಕಾರಿ ಎಂದು ಹೇಳಗುತ್ತಿದೆ.

ಈ ಮೊದಲು ವಿವಿಧ ಬೀಟಾ ಆವೃತ್ತಿ ಅಪ್‌ಡೇಟ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಪರೀಕ್ಷಿಸಲಾಗಿತ್ತು. ಈಗ ವಾಟ್ಸಪ್ ಡಾರ್ಕ್ ಮೋಡ್ ಅನ್ನು ಅಂತಿಮವಾಗಿ ಎಲ್ಲ ಬಳಕೆದಾರರಿಗೂ ಬಿಡುಗಡೆ ಮಾಡಿದೆ. ಮುಂದೆ ವಾಟ್ಸಪ್ ವೆಬ್ ಕೂಡ ಡಾರ್ಕ್‌ ಮೋಡ್‌ನಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಇನ್ನು ಡಾರ್ಕ್ ಮೋಡ್ ಬಳಕೆ ಹೇಗೆ?
ಡಾರ್ಕ್ ಮೋಡ್ ಇಷ್ಟಪಡುವವರು ಆಂಡ್ರಾಯ್ಡ್ 10 ಮತ್ತು ಐಓಎಸ್ 13 ಆವೃತ್ತಿಯಲ್ಲಿ ವಾಟ್ಸಪ್ ಡಾರ್ಕ್ ಮೋಡ್ ಬಳಸಬಹುದು. ಇದಕ್ಕಾಗಿ ವಾಟ್ಸಪ್ ಅನ್ನು ಮೊದಲು ಅಪ್‌ಡೇಟ್ ಮಾಡಿ. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ವಾಟ್ಸಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಬಳಿಕ ವಾಟ್ಸಪ್ ಸೆಟ್ಟಿಂಗ್ಸ್‌ ಗೆ ಹೋಗಿ, ಅದರಲ್ಲಿ ಚಾಟ್ಸ್ ಸೆಲೆಕ್ಟ್ ಮಾಡಿ, ಡಿಸ್‌ ಪ್ಲೇ ಕ್ಲಿಕ್ ಮಾಡಿ ಬಳಿಕ ಡಾರ್ಕ್ ಥೀಮ್ ಸೆಲೆಕ್ಟ್ ಮಾಡಬೇಕು. ಈಗ ನಿಮ್ಮ ಫೋನ್‌ ನಲ್ಲಿ ವಾಟ್ಸಪ್‌ ಡಾರ್ಕ್ ಮೋಡ್‌ ಚಾಲನೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com