ಜುಲೈ 17ಕ್ಕೆ ಟೆಕ್ನೋ ಹೊಸ ಧಮಾಕಾ: 6500mAh ಬ್ಯಾಟರಿ, AI ಕ್ಯಾಮೆರಾದೊಂದಿಗೆ Tecno Camon 50 Ultra ಲಾಂಚ್! ಬೆಲೆ ಎಷ್ಟು ಗೊತ್ತಾ?

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟೆಕ್ನೋ ಕಂಪನಿಯು, ಗ್ರಾಹಕರಾಗಿ ಮತ್ತೊಂದು ಅತ್ಯಾಧುನಿಕ ಮೊಬೈಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆ ಕುರಿತ ವರದಿ ಇಲ್ಲಿದೆ.
Tecno Camon 50 Ultra 5G
Tecno Camon 50 Ultra 5GTecno Camon 50 Ultra 5G
Updated on
Tecno Camon 50 Ultra 5G
Tecno Camon 50 Ultra 5G

Tecno Camon 50 Ultra 5G: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟೆಕ್ನೋ (Tecno) ಕಂಪನಿಯು, ಗ್ರಾಹಕರಾಗಿ ಮತ್ತೊಂದು ಅತ್ಯಾಧುನಿಕ ಮೊಬೈಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದೇ ಟೆಕ್ನೋ ಕ್ಯಾಮನ್ 50 ಅಲ್ಟ್ರಾ 5ಜಿ (Tecno Camon 50 Ultra 5G). ಬಲಿಷ್ಠ ಬ್ಯಾಟರಿ, ಸುಧಾರಿತ AI ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಈ ಪ್ರೀಮಿಯಂ ಸ್ಮಾರ್ಟ್‌ಫೋನ್, ಇದೇ ಜುಲೈ 17 ರಂದು ಲಾಂಚ್ ಆಗಲಿದೆ. ಆ ಕುರಿತ ವರದಿ ಇಲ್ಲಿದೆ.

Tecno Camon 50 Ultra 5G
Tecno Camon 50 Ultra 5G

ಆಕರ್ಷಕ ಡಿಸ್‌ಪ್ಲೇ ಮತ್ತು ವಿನ್ಯಾಸ:

ಟೆಕ್ನೋ ಕ್ಯಾಮನ್ 50 ಅಲ್ಟ್ರಾ 5ಜಿ, ಸೈಪ್ರೆಸ್ ಗ್ರೀನ್, ಮಿಸ್ಟಿ ಪರ್ಪಲ್ ಮತ್ತು ನೆಬ್ಯುಲಾ ಟೈಟಾನಿಯಂ ಎಂಬ ಮೂರು ಬಣ್ಣಗಳಲ್ಲಿ ಬರಲಿದೆ. ಇದರೊಂದಿಗೆ, 6.78-ಇಂಚಿನ 1.5K Pro XDR ಕರ್ವ್ಡ್ AMOLED ಡಿಸ್‌ಪ್ಲೇ ಹೊಂದಿದ್ದು, ಇದರ 144Hz ರಿಫ್ರೆಶ್ ರೇಟ್ ಗೇಮಿಂಗ್ ಆಡುವಾಗ ಮತ್ತು ಹೈ-ಡೆಫಿನಿಷನ್ ವಿಡಿಯೋ ವೀಕ್ಷಣೆಗೆ ಅತ್ಯುತ್ತಮವಾಗಿದೆ. ಅದರಲ್ಲೂ, ಫೋನ್‌ನ ವೇಗ ಹಾಗೂ ಮಲ್ಟಿಟಾಸ್‌ಕಿಂಗ್‌ಗೆ ಅಗತ್ಯವಿರುವ ಶಕ್ತಿಶಾಲಿ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟಿಮೇಟ್ ಪ್ರೊಸೆಸರ್ ಬಳಸಲಾಗಿದೆ. ಜೊತೆಗೆ ಇದು Android 16 ಆಧಾರಿತ HiOS 16 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Tecno Camon 50 Ultra 5G
Tecno Camon 50 Ultra 5G

ಅತ್ಯಾಧುನಿಕ AI ಕ್ಯಾಮೆರಾ ವೈಶಿಷ್ಟ್ಯ:

ಕ್ಯಾಮೆರಾ ಪ್ರಿಯರಿಗಾಗಿ ಈ ಫೋನ್‌ನಲ್ಲಿ ಅದ್ಭುತ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಅದರಂತೆ, ಬ್ಯಾಕ್ ಕ್ಯಾಮೆರಾದಲ್ಲಿ Sony LYTIA 700C ಸೆನ್ಸಾರ್ ಒಳಗೊಂಡ 50MP ಪ್ರಮುಖ ಕ್ಯಾಮೆರಾ ಇದೆ. ಇದರೊಂದಿಗೆ 3X ಆಪ್ಟಿಕಲ್ ಜೂಮ್ ಬೆಂಬಲಿಸುವ 50MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಅಳವಡಿಸಲಾಗಿದೆ. ಈ ಫೋನ್‌ನ ಪ್ರಮುಖ ಆಕರ್ಷಣೆಯೇ ಇದರ ಒನ್-ಟ್ಯಾಪ್ AI ಪರಿಕರಗಳು. ಇದರ ಸಹಾಯದಿಂದ ಫೋಟೋದಲ್ಲಿರುವ ಬೇಡದ ವಸ್ತುಗಳನ್ನು ಸುಲಭವಾಗಿ ಡಿಲೀಟ್ ಮಾಡಬಹುದು ಮತ್ತು ಚಿತ್ರದ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ.

Tecno Camon 50 Ultra 5G
Tecno Camon 50 Ultra 5G

ಬಿಗ್ ಬ್ಯಾಟರಿ ಸಾಮರ್ಥ್ಯ

ದೀರ್ಘಾವಧಿಯ ಬಳಕೆಗೆ ಪೂರಕವಾಗಿ ಟೆಕ್ನೋ ಕಂಪನಿಯು ಇದರಲ್ಲಿ 6500mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ನೀಡಿದೆ. ಅದರಂತೆ, ಇದು ಒಂದೇ ಚಾರ್ಜ್‌ನಲ್ಲಿ ದೀರ್ಘಕಾಲ ಬಾಳಿಕೆ ಬರುತ್ತದೆ. ಜೊತೆಗೆ, ಅತ್ಯಂತ ವೇಗವಾಗಿ ಚಾರ್ಜ್ ಮಾಡಲು 45W ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

Tecno Camon 50 Ultra 5G
Tecno Camon 50 Ultra 5G

ಮುಂದುವರೆದು, ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ: ಅದರಂತೆ, 12 GB RAM + 256 GB ಸ್ಟೋರೇಜ್, 12 GB RAM + 512 GB ಸ್ಟೋರೇಜ್, ಮತ್ತು 12 GB RAM + 256 GB ಸ್ಟೋರೇಜ್ ಇರಲಿದ್ದು, ಇದರ ಬೆಲೆಯು ಅಂದಾಜು ಸುಮಾರು 34,999 ರೂಪಾಯಿಗಳೊಂದಿಗೆ ಇದೇ ಜುಲೈ 17 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com