ಸೋರಿಯಾಇಸಿಸ್!

ಸೋರಿಯಾಸಿಸ್!...15ರಿಂದ 25 ವರ್ಷದೊಳಗಿನವರವನ್ನು ಕಾಡುತ್ತಿದ್ದ...
ಸೋರಿಯಾಇಸಿಸ್
ಸೋರಿಯಾಇಸಿಸ್

ಸೋರಿಯಾಸಿಸ್!...15ರಿಂದ 25 ವರ್ಷದೊಳಗಿನವರವನ್ನು ಕಾಡುತ್ತಿದ್ದ ಈ ಸಮಸ್ಯೆ ಇತ್ತೀಚಿಗೆ ಎಲ್ಲ ವಯೋವಾನದವರನ್ನೂ, ಲಿಂಗಭೇದವಿಲ್ಲದೆ ಕಾಡುತ್ತಿದೆ. ಇಸಿಸ್ ಉಗ್ರನಿಗಿಂತ ಭಾಕರವಾಗಿ ಕಾಟ ಕೊಡುತ್ತದೆ. ಚರ್ಮ ಕೆಂಪಾಗುವಿಕೆ, ಮಾಸದ ಗಾಯಗಳು, ಸುಕ್ಕುಗಟ್ಟಿದ ಹಾಗೂ ಒರುಟು ಚರ್ಮ, ಉರಿ, ತುರಿಕೆ, ಊತ ಇದರ ಲಕ್ಷಣಗಳು, ರೋಗಿಯ ದೇಹ ಸ್ಥಿತಿಯ ಮೇಲೆ ಈ ಲಕ್ಷಣಗಳು ಅವಲಂಬಿತವಾಗಿರುತ್ತದೆ.

ಚರ್ಮಕ್ಕೆ ತಗಲುವ ಭೀಕರ ಕಾಯಿಲೆ ಸೋರಿಯಾಸಿಸ್. ಚರ್ಮ ಕೆಂಪಾಗುವಿಕೆ, ಮಾಸದ ಗಾಯಗಳು, ಸುಕ್ಕುಗಟ್ಟಿದ ಹಾಗೂ ಒರಟು ಚರ್ಮ, ಉರಿ, ತುರಿಕೆ, ಊತ ಇದರ ಲಕ್ಷಣಗಳು. ರೋಗಿಯ ದೇಹ ಸ್ಥಿತಿಯ ಮೇಲೆ ಈ ಲಕ್ಷಣಗಳು ಅವಲಂಬಿತವಾಗಿರುತ್ತದೆ.

ಮಾನವನನ್ನು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತದೆ ಈ ಚರ್ಮರೋಗ. ದೀರ್ಘಕಾಲದಲ್ಲಿ ಕಾಡುವ ಇದು ಯುವ ಜನತೆಯನ್ನೂ ಕಾಡುವ ವ್ಯಾಧಿ. ಸ್ವಾಭಾವಿಕವಾಗಿ ಚರ್ಮಕ್ಕೆ ಹಳೆ ಪದರವನ್ನು ಕಳಚಿಕೊಂಡು, ಹೊಸತನ್ನು ಸೃಷ್ಟಿಸಿಕೊಳ್ಳಲು 28-30 ದಿವಸ ಬೇಕಾಗುತ್ತದೆ. ಆದರೆ ಈ ಚರ್ಮರೋಗವಿದ್ದಲ್ಲಿ, 3-6ದಿನಗಳಲ್ಲಿ ಉದುರಿ ಹೋಗಬೇಕಾದ ಚರ್ಮ ಹಾಗೆ ಇರುತ್ತದೆ.

ಅದರ ಮೇಲೆಯೇ ಹೊಸ ಪದರವೂ ಹುಟ್ಟಿಕೊಳ್ಳುತ್ತದೆ. ಹೀಗೆ ಒಂತದರ ಮೇಲೊಂದು ಮಡಿಕೆಯಾಗಿ ಹಾಗೆ ಉಳಿಯುತ್ತದೆ.

15-25 ವರ್ಷದೊಳಗಿನವರನ್ನು ಕಾಡುತ್ತಿದ್ದ ಈ ಸಮಸ್ಯೆ ಇತ್ತೀಚೆಗೆ ಎಲ್ಲ ವಯೋವಾನದವರನ್ನೂ, ಲಿಂಗಭೇದವಿಲ್ಲದೆ ಕಾಡುತ್ತಿದೆ. ಇಮ್ಯೂನ್ ಮೀಡಿಯೇಟೆಡ್ ರೆಸ್ಪಾನ್ಸ್ ಅಂದರೆ ನಮ್ಮ ದೇಹವು ಅದರದ್ದೇ ಆದ ಒಂದು ಹಂತದ ಕ್ರಿಯೆಯಲ್ಲಿ ತೊಡಗಿರುತ್ತದೆ.

ಈ ಕ್ರಿಯೆಯಲ್ಲಿ ಏರುಪೇರಾದರೆ ಚರ್ಮ ಅಗತ್ಯಕ್ಕಿಂತ ಜಾಸ್ತಿ ಕೋಶಗಳ್ನು ಉತ್ಪಾದಿಸುತ್ತದೆ. ಈ ಕೋಶಗಳ ಅವತರಣಿಕೆಯಿಂದ ಸೋರಿಯಾಸಿಸ್‌ಗೆ ಎಡೆ ಮಾಡಿಕೊಡುತ್ತದೆ. ತಂದೆ ತಾಯಿಯಿಂದಲೂ ಬರಬಹುದು.

ಕಳೆ ಕುಂದುತ್ತೆ ಚರ್ಮದ್ದು

ಚರ್ಮದ ಮೇಲೆ ಕೆಂಬಣ್ಮದ ಕಲೆಗಲು ಕಾಣಿಸಿಕೊಳ್ಳುತ್ತದೆ. ಚರ್ಮ ಉಬ್ಬಿದಂತಾಗುತ್ತದೆ. ಒಣಗಿದ ಚರ್ಮ, ಬಿರುಕಾದ ತ್ವಚೆ, ಆಗಾಗ ರಕ್ತ ಸೋರಿಕೆ, ಚರ್ಮದಲ್ಲಿ ಉರಿ, ಕಡಿತ ಮತ್ತು ನೋವು ಕಾಣಿಸುತ್ತದೆ.

ಸಂದುಗಳಲ್ಲಿ ಊತ ಮತ್ತು ಚಲಿಸುವಾಗ ಹಿಡಿದಂತಾಗುತ್ತದೆ. ನಿದ್ರಾಭಂಗ, ನರದೌರ್ಬಲ್ಯ, ಸುಕ್ಕುಗಟ್ಟಿದ ಚರ್ಮವೂ ಇತರೆ ಕಾರಣಗಳು.

ಕೈ, ಕುತ್ತಿಗೆ, ತೊಡೆಯ ಭಾಗ, ಮೊಣಗಂಟು, ಬೆನ್ನು, ಸೊಂಟದ ಸುತ್ತಲೂ ಸೇರಿದಂತೆ ದೇಹದ ಇತರೆ ಭಾಗದ ಚರ್ಮ ಈ ತೊಂದರೆಗೊಳಗಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಇದನ್ನು ಗುರುತಿಸಿ, ಚಿಕಿತ್ಸೆ ಪಡೆಯದಿದ್ದಲ್ಲಿ ಮುಖ ಹಾಗೂ ಶರೀರದ ಎಲ್ಲ ಭಾಗಗಳಿಗೂ ಆವರಿಸಬಹುದು. ಅಶುಚಿತ್ವ, ಮಾನಸಿಕ ಒತ್ತಡ, ಜೀವನಶೈಲಿ, ಅನುವಂಶೀಯತೆ ಮತ್ತಿತರೆ ಕಾರಣಗಳು.

ಚಿಕಿತ್ಸೆ ಇದೆ ಚಿಂತಿಸದಿರಿ

ಹೋಮಿಯೋಪಥಿಯಲ್ಲಿ ಈ ಸಮಸ್ಯೆಗೆ ಪರಿಹಾರವಿದೆ. ಸಮಸ್ಯೆಯ ಕಾರಣ ಹುಡುಕಿ, ರೋಗದ ಲಕ್ಷಣ ಹಾಗೂ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ.

ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಂಚಕರ್ಮ ಸೇರಿದಂತೆ ಭರವಸೆಯುಳ್ಳ ಚಿಕಿತ್ಸೆ ನೀಡಲಾಗುತ್ತದೆ. ಜೀವನ ಶೈಲಿಯಲ್ಲೂ ಸೂಕ್ತ ಬದಲಾವಣೆ ಅಗತ್ಯ.

ಪ್ರತಿನಿತ್ಯ 7-8ಗಂಟೆ ನಿದ್ರೆ, ಜೀವ ಸತ್ವುವುಳ್ಳ ಆಹಾರ ಸೇವನೆ, ತುಸು ಕಾಲ ಹೊರಗಿನ ವಾತಾವರಣದಲ್ಲಿ ವಿಹರಿಸಿದರೆ ಒಳ್ಳೆಯದು. ಒಮ್ಮೆ ಈ ರೋಗ ಆರಂಭವಾದರೆ, ವಾಸಿ ಮಾಡುವುದು ಕಷ್ಟ, ನೋಡಲು ಅಸಹ್ಯವೆನಿಸುತ್ತದೆ. ಆದ್ದರಿಂದ ಸೂಕ್ತ ಚಿಕಿತ್ಸೆಗೆ ಮುಂದಾದಲ್ಲಿ ಪರಿಹಾರ ಸಾಧ್ಯ.

ಕೆಲವು ಮುನ್ನೆಚ್ಚರಿಕೆ

  • ಬೇರೆಯವರ ವಸ್ತುಗಳನ್ನು ಬಳಸೋದು ಬೇಡ.
  • ಇತರರ ಟವೆಲ್, ಸಾಬೂನಿಗಳನ್ನು ಬಳಸಬೇಡಿ.
  • ಕ್ರಿಮಿನಾಶಕ ಸಾಬೂನುಗಳಿಂದ ದೂರವಿರಿ.
  • ತೀವ್ರ ಉಷ್ಣ ಅಥವಾ ಚಳಿಯ ವಾತಾವರಣಕ್ಕೆ ಮೈ ಒಡ್ಡದಿರಿ.
  • ಹವಾ ನಿಯಂತ್ರಣ ಕೊಠಡಿಗಳಿಂದ ದೂರವಿರಿ.
  • ದೇಹದ ಕ್ರಿಯೆಗಳ ಸಮತೋಲನಕ್ಕಾಗಿ ಹೆಚ್ಚು ನೀರು ಕುಡಿಯಿರಿ.
ಆಹಾರದಲ್ಲಿ ಚೌಕಾಸಿ
  • ಕರಿದ ಆಹಾರ, ಮಸಾಲೆಯುಕ್ತ ಪದಾರ್ಥಗಳು ಬೇಡ, ಉಪ್ಪಿನ ಸೇವನೆ ತುರಿಕೆ ತರುತ್ತದೆ.
  • ಮೀನು, ಬೆಲ್ಲ, ಹಾಲು, ಬೆಣ್ಣೆ, ಮಜ್ಜಿಗೆ, ಅತಿ ಬಿಸಿಯಾದ ಆಹಾರವೂ ಬೇಡ.
  • ಅತಿ ಆಮ್ಲೀಯ ಆಹಾರ ಪದಾರ್ಥಗಳಿಂದಲೂ ದೂರವಿರಿ.
  • ಮದ್ಯಪಾನ ವರ್ಜಿಸಿದರೆ ಒಳ್ಳೆಯದು.


-ಎಂ.ಡಿ.ಉಮೇಶ್‌ಮಳವಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com