ಪಾರ್ಕಿನ್ ಸನ್ ರೋಗಿಗಳಿಗೆ ನೆರವಾಗಲು "ಗೂಗಲ್ ಜಾಣ ಚಮಚ"

ಗೂಗಲ್ ಅಂದರೆ ಬರೀ ಸರ್ಚ್ ಎಂಜಿನ್
ಗೂಗಲ್ ಸ್ಮಾರ್ಟ್ ಸ್ಪೂನ್
ಗೂಗಲ್ ಸ್ಮಾರ್ಟ್ ಸ್ಪೂನ್

ಗೂಗಲ್ ಅಂದರೆ ಬರೀ ಸರ್ಚ್ ಎಂಜಿನ್ ಅಲ್ಲ, ಬರೀ ಈಮೇಲ್ ಅಲ್ಲ, ಬರೀ ಆಂಡ್ರಾಯ್ದ್  ಮೊಬೈಲ್ ಫೋನ್ ಅಲ್ಲ! ಈಗ ಗೂಗಲ್ ನಿಂದ ಹೊಸದೊಂದು ಕೊಡುಗೆ - ಗೂಗಲ್ ಜಾಣ ಚಮಚ!

ಕೈ ನಡುವುದರಿಂದ ನರಳುತ್ತಿರುವವರಿಗೆ ಅಥವಾ ಪಾರ್ಕಿನ್ ಸನ್ ರೋಗದಿಂದ ನರಳುತ್ತಿರುವವರಿಗೆ ಚಮಚದಿಂದ ಊಟ ತಿನ್ನುವುದು ಬಹಳ ಕಷ್ಟ. ಆದರೆ ಇನ್ನು ಮುಂದೆ ಹಾಗಿಲ್ಲ. ಈ ಗೂಗಲ್ ಸ್ಮಾರ್ಟ್ ಸ್ಪೂನ್ ಬಳಸಿ ಊಟ ತಿಂದರೆ ಆ ಚಮಚ ನಡುಗುವುದು ೭೬% ಕಡಿಮೆಯಾಗುತ್ತದೆ, ಹಾಗೆಯೇ ಊಟ ಸರಾಗವಾಗಿ ಬಾಯಿ ಸೇರುತ್ತದೆ.

ಭಾರತೀಯ ಮೂಲದ ಅನುಪಮ್ ಪಾಠಕ್ ಅವರ ಕೂಸಿನ ಸಂಸ್ಥೆ "ಲಿಫ್ಟ್ ಲ್ಯಾಬ್" ಅನ್ನು ಗೂಗಲ್ ಈ ವರ್ಷದ ಮೊದಲ ಭಾಗದಲ್ಲಿ ಕೊಂಡುಕೊಂಡಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ಮಾಡುತ್ತಿದ ಈ ಸಂಸ್ಥೆಯ ಯೋಜನೆಯಾಗಿತ್ತು ಈ ಚಮಚ.

ವಿಶ್ವದಾದ್ಯಂತ ಪಾರ್ಕಿನ್ ಸನ್ ರೋಗದಿಂದ ಸುಮಾರು ೧೦ ದಶಲಕ್ಷ ಜನ ನರಳುತ್ತಾರೆ. ಗೂಗಲ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಸೆರ್ಜರಿ ಬ್ರಿನ್ ಅವರ ತಾಯಿ ಕೂಡ ಈ ರೋಗದಿಂದ ನರಳುತ್ತಿದ್ದರು. ಬ್ರಿನ್ ಈ ಸಂಸೋಧಂಗೆ ೫೦ ದಶಲಕ್ಷ ಡಾಲರ್ ದಾನ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com