ಸಂಬಂಧಗಳು ಮುರಿದುಬಿದ್ದರೆ ಅತಿ ಹೆಚ್ಚು ನೊಂದುಕೊಳ್ಳುವ ಮಹಿಳೆಯರು ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾರೆ!

ಸಂಬಂಧಗಳು ಮುರಿದುಬಿದ್ದ ಕಹಿ ನೆನಪಿನಿಂದ ಹೆಚ್ಚು ನೋವಾದರೂ ಹುಡುಗಿಯರೇ ಅತಿ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.
ಸಂಬಂಧಗಳು ಮುರಿದುಬಿದ್ದರೆ ಅತಿ ಹೆಚ್ಚು ನೊಂದುಕೊಳ್ಳುವ ಮಹಿಳೆಯರು ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾರೆ!

ನ್ಯೂಯಾರ್ಕ್: ಪ್ರೇಮ ಪ್ರಕರಣಗಳು ಮುರಿದುಬಿದ್ದರೆ ಯುವತಿಯರಿಗಿಂತ, ದೇವದಾಸ್ ಗಳಾಗುವ ಯುವಕರೇ ಹೆಚ್ಚು ಕಾಲ ನೊಂದುಕೊಳ್ಳುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಂಬಂಧಗಳು ಮುರಿದುಬಿದ್ದ ಕಹಿ ನೆನಪಿನಿಂದ ಹೆಚ್ಚು ನೋವಾದರೂ ಹುಡುಗಿಯರೇ ಅತಿ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.

ನ್ಯೂಯಾರ್ಕ್ ನ ಬಿಂಗ್ ಹ್ಯಾಮ್ಟನ್ ವಿಶ್ವವಿದ್ಯಾನಿಲಯ ನಡೆಸಿರುವ ಅಧ್ಯಯನದ ಪ್ರಕಾರ, ಸಂಗಾತಿಯನ್ನು ಕಳೆದುಕೊಂಡ ಪ್ರಾರಂಭದಲ್ಲಿ ಯುವತಿಯರೇ ಹೆಚ್ಚು ನೋವನ್ನು ಅನುಭವಿಸುತ್ತಾರೆ. ಆದರೆ ಅದರಿಂದ ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾರೆ. ಯುವಕರು ಮಾತ್ರ ಅತಿ ಹೆಚ್ಚು ಕಾಲ ವೇದನೆ ಅನುಭವಿಸುತ್ತಾರಂತೆ. ಅಲ್ಲದೆ ಮುರಿದುಬಿದ್ದ ಸಂಬಂಧವನ್ನು ಭರಿಸಲಾಗದ ನಷ್ಟ ಎಂದು ಭಾವಿಸುತ್ತಾನೆ ಎಂದು ಅಧ್ಯಯನದ ಭಾಗವಾಗಿದ್ದ ಕ್ರೇಗ್ ಮೋರಿಸ್ ಹೇಳಿದ್ದಾರೆ.

ಭಾವನಾತ್ಮಕವಾಗಿ ಹೆಚ್ಚು ನೋವುಂಟಾದರೂ ಅದರಿಂದ ಶೀಘ್ರವೇ ಹೊರಬರುವ ಸಾಮರ್ಥ್ಯ ಮಹಿಳೆಯರಿಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ. 96 ದೇಶಗಳ ಒಟ್ಟು 5 , 705  ಜನಗಳನ್ನು ಸಮೀಕ್ಷೆಗೋಳಪಡಿಸಲಾಗಿದೆ. ಪ್ರಾರಂಭದಲ್ಲಿ ಮಹಿಳೆಯರೇ ಅತಿ ಹೆಚ್ಚು  ನೊಂದುಕೊಳ್ಳುತ್ತಾರಾದರೂ ಅದನ್ನು ಬೇಗ ಮರೆಯುತ್ತಾರೆ. ಆದರೆ ಪುರುಷರು ದೀರ್ಘ ಕಾಲ(ಅಥವಾ ಶಾಶ್ವತವಾಗಿ) ನೋವಿನಿಂದ ಬಳಲುತ್ತಾರೆ ಎಂದು ಅತಿ ಹೆಚ್ಚು ಜನರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಗಳು ಮುರಿದುಬೀಳುವುದರಿಂದ ಮನುಷ್ಯನ ಆಯಸ್ಸು ಕೂಡ ಕೆಲವು ವಾರ, ತಿಂಗಳ ವರೆಗೆ ಕಡಿಮೆಯಾಗುತ್ತದೆ ಎಂದು ಎವಲ್ಯೂಷನರಿ ಬಿಹೇವಿಯರಲ್ ಸೈನ್ಸಸ್ ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com