ಅಧಿಕ ಗ್ರೀನ್ ಟಿ ಸೇವನೆಯಿಂದ ಬಂಜೆತನ ಹೆಚ್ಚು!

ನೀವು ಗ್ರೀನ್ ಟಿ ಅಧಿಕವಾಗಿ ಸೇವನೆ ಮಾಡುತ್ತೀರಾ? ಹಾಗಾದರೆ ಫಲವತ್ತತೆಗೆ ಹಾನಿಯಾಗುವುದು ಖಚಿತ ಎನ್ನುತ್ತಿದೆ ಹೊಸ ಸಂಶೋಧನಾ ವರದಿ.
ಗ್ರೀನ್ ಟಿ(ಸಾಂದರ್ಭಿಕ ಚಿತ್ರ)
ಗ್ರೀನ್ ಟಿ(ಸಾಂದರ್ಭಿಕ ಚಿತ್ರ)

ನ್ಯೂಯಾರ್ಕ್: ನೀವು ಗ್ರೀನ್ ಟಿ ಅಧಿಕವಾಗಿ ಸೇವನೆ ಮಾಡುತ್ತೀರಾ? ಹಾಗಾದರೆ ಬಂಜೆತನ ಹೆಚ್ಚಾಗುವುದು ಖಚಿತ ಎನ್ನುತ್ತಿದೆ ಹೊಸ ಸಂಶೋಧನಾ ವರದಿ. ಆಕ್ಸಿಡೆಂಟ್ ನಿರೋಧಕ ಹಾಗೂ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಬಂಜೆತನ ಹೆಚ್ಚಾಗುವುದಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ ಇರ್ವೈನ್ ವಿಶ್ವವಿದ್ಯಾಲಯದಲ್ಲಿ ಫ್ರೂಟ್ ಫ್ಲೈ ಮೇಲೆ ಈ ಬಗ್ಗೆ ಪ್ರಯೋಗ ನಡೆದಿದ್ದು ಗ್ರೀನ್ ಟೀ ಹೆಚ್ಚು ಸೇವನೆ ಹಣ್ಣು ನೊಣಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.   
ಬಂಜೆತನ ಹೆಚ್ಚಾಗುವುದರಿಂದ ಗ್ರೀನ್ ಟಿ ಯನ್ನು ಮಿತವಾಗಿ ಸೇವಿಸಬೇಕು ಗ್ರೀನ್ ಟಿ ಕಡಿಮೆ ಸೇವನೆಯಿಂದ ಬಂಜೆತನ ಕಡಿಮೆಯಾಗುವುದೂ ಅಲ್ಲದೇ ಅತಿ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಗ್ರೀನ್ ಟಿ ಸೇವನೆ ಪ್ರಮಾಣವನ್ನು ನಿಗದಿಪಡಿಸುವುದಕ್ಕೆ ಮತ್ತಷ್ಟು ಕಾಲಾವಕಾಶ ಬೇಕು ಎಂದು ಸಂಶೋಧನಾ ತಂಡದ ಮಹ್ತಾಬ್ ಜಫರಿ ಹೇಳಿದ್ದಾರೆ. ಫಂಕ್ಷನಲ್ ಫುಡ್ಸ್ ಜರ್ನಲ್ ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com