ಎಚ್‌1ಎನ್‌1 ಮಹಾಮಾರಿಗೆ ದೇಶದಲ್ಲಿ 624 ಜನರ ಸಾವು

ದೇಶದಲ್ಲಿ ಎಚ್1ಎನ್1 ಮಹಾಮಾರಿ ಸದ್ದಿಲ್ಲದೆ ಸಾವು ಬಯಸುತ್ತಿದೆ. ಕಳೆದ 48 ದಿನಗಳಲ್ಲಿ ದೇಶದಲ್ಲಿ ಹಂದಿ ಜ್ವರ...
ಎಚ್1ಎನ್1
ಎಚ್1ಎನ್1

ನವದೆಹಲಿ: ದೇಶದಲ್ಲಿ ಎಚ್1ಎನ್1 ಮಹಾಮಾರಿ ಸದ್ದಿಲ್ಲದೆ ಸಾವು ಬಯಸುತ್ತಿದೆ. ಕಳೆದ 48 ದಿನಗಳಲ್ಲಿ ದೇಶದಲ್ಲಿ ಹಂದಿ ಜ್ವರಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 624 ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಅಂಕಿ ಅಂಶ ಪ್ರಕಾರ ಫೆ.12ರಿಂದ ಕಳೆದ ಮೂರು ದಿನಗಳಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 100ಕ್ಕೂ ಹೆಚ್ಚು. ವರ್ಷದ ಆರಂಭದಿಂದ ಇದುವರೆಗೆ ಅಂದರೆ ಕೇವಲ 48 ದಿನಗಳಲ್ಲಿ ಜ್ವರಕ್ಕೆ ಆಹುತಿಯಾದವರು 624ಕ್ಕೂ ಹೆಚ್ಚು. ಇನ್ನೂ ಸರ್ಕಾರದ ಗಮನಕ್ಕೆ ಬರದ ಎಷ್ಟೋ ಪ್ರಕರಣಗಳಿರಬಹುದು.

ಕರ್ನಾಟಕ, ಹೈದ್ರಾಬಾದ್, ತಮಿಳುನಾಡು, ಮಹಾರಾಷ್ಟ್ರ,  ರಾಜಸ್ಥಾನ, ಗುಜರಾತ್,ಪಂಜಾಬ್, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ರಾಜ್ಯಗಳಲ್ಲಿ ಅತೀ ಹೆಚ್ಚು ರೋಗ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ ಇದುವರೆಗಿನ ಅಂಕಿಅಂಶಗಳು ಪ್ರಕಾರ 24 ಜನರು ಹಂದಿಜ್ವರದಿಂದ ಮೃತಪಟ್ಟಿದ್ದು, 326 ಮಂದಿಗೆ ರೋಗ ತಗುಲಿದೆ.

ದೇಶದೆಲ್ಲೆಡೆ ಜ್ವರಬಾಧೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಔಷಧ ಮತ್ತು ರೋಗಪತ್ತೆ ಕಿಟ್‌ಗಳ ಹೆಚ್ಚುವರಿ ದಾಸ್ತಾನಿಗೆ ಕೇಂದ್ರ ಸರಕಾರ ಆದೇಶಿಸಿದೆ. ಹೆಚ್ಚು ರೋಗಪೀಡಿತ ರಾಜ್ಯಗಳಿಗೆ ಕೇಂದ್ರ ತಜ್ಞರ ತಂಡಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com